ನಾಪೋಕ್ಲು, ಏ. 13: ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯವಕಪಾಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮೂರು ಸೇತುವೆಗಳ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ. ಇದರಿಂದಾಗಿ ತೀವ್ರ ಸಂಕಷ್ಟವನ್ನು ಎದುರಿಸುತ್ತಿರುವ ಗ್ರಾಮಸ್ಥರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಿ ಸರ್ಕಾರ ಮತ್ತು ಜನಪ್ರತಿನಿಧಿಗಳ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಯವಕಪಾಡಿ ಗ್ರಾಮದÀ ಮಂಙ್ಞಂಡ್ರ ಕುಟುಂಬಸ್ಥರ ಸ್ಮಶಾನ, ಗದೆÀÀ್ದ, ಮನೆÀಗಳ, ಸಂಪರ್ಕ ಕಲ್ಪಿಸುವ ಸೇತುವೆಯೊಂದು ಕಳೆದ 20 ವರ್ಷಗಳ ಹಿಂದೆ ಶಿಥಿಲಗೊಂಡ ಹಿನ್ನೆಲೆಯಲ್ಲಿ ಕಳೆದ 5 ವರ್ಷಗಳ ಹಿಂದೆ ಸೇತುವೆ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಆದರೆ ಗ್ರಾಮಸ್ಥರ ದುರದೃಷ್ಟವೋ ಏನೋ? 4 ಪಿಲ್ಲರ್‍ಗಳನ್ನು ನಿರ್ಮಿ ಸಿದ ಬಳಿಕ ಸೇತುವೆ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ.
ಇನ್ನೊಂದು ಸೇತುವೆಗೆ ಮಂಙ್ಞಂಡ್ರ ಕುಟುಂಬಸ್ಥರು ಮರದ ದಿಮ್ಮಿಗಳನ್ನು ಹಾಕಿ ಅದರ ಮೇಲೆ ಸರ್ಕಸ್ ಮಾಡುತ್ತಾ ಸಂಚರಿಸ ಬೇಕಾಗಿದೆ. ವಯೋವೃದ್ಧರ ಪಾಡಂತೂ ಹೇಳೋದೇ ಬೇಡ. ಸ್ವಲ್ಪ ಆಯಾ ತಪ್ಪಿದರೂ ಕಾಲಬುಡದಲ್ಲಿ ಹರಿಯುವ ಕೈಮಾನಿ ಹೊಳೆಯ ಪಾಲಾಗೋದು ಶತಃಸಿದ್ಧ. ಇನ್ನೊಂದು ಕಿರುಸೇತುವೆ ಸ್ಥಗಿತಗೊಂಡಿದೆ.
ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು, ಸೇತುವೆ ನಿರ್ಮಾಣಕ್ಕೆ ಅಳವಡಿಸಿದ ಕಬ್ಬಿಣದ ರಾಡ್‍ಗಳು ಅಸ್ಥಿಪಂಜರದಂತೆ ಹೊರಕ್ಕೆ ಚಾಚಿವೆ ಎಂದು ಮಂಙ್ಞಂಡ್ರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬದಿಯಿಂದ ಆ ಬದಿಗೆ ತೆರಳಬೇಕಾದರೆ ಸರ್ಕಸ್ ಮಾಡುತ್ತಾ ಸಂಚರಿಸಬೇಕÀು ತಪ್ಪಿದ್ದಲ್ಲಿ 4-5 ಕಿ.ಮೀ. ಬಳಸುದಾರಿಯಲ್ಲಿ ಸಂಚರಿಸ ಬೇಕಾಗಿದೆ. ಮಳೆಗಾಲದಲ್ಲಿ ಕೈಮಾನಿ ಹೊಳೆ ಉಕ್ಕಿ ಹರಿಯುವದರಿಂದ ಪಾಡು ಹೇಳತೀರದು. ಸೇತುವೆಯ ಒಂದು ಬದಿಯಲ್ಲಿ ಸ್ಮಶಾನವಿದ್ದು, ಬೇಸಿಗೆಯಲ್ಲಿ ಮೃತದೇಹವನ್ನು ಹೇಗೋ ಕೊಂಡೊಯ್ಯುತ್ತಾರೆ. ಆದರೆ ಮಳೆಗಾಲದಲ್ಲಿ ಯಾರಾದರೂ ಮೃತಪಟ್ಟರೆ ಪಾಡು ಹೇಳೋದೇ ಬೇಡ. ಈ ಎಲ್ಲಾ ಸಂಕಷ್ಟಗಳಿಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿಯೇ ಕಾರಣವೆಂದು ಆರೋಪಿಸಿ ಮಂಙ್ಞಂಡ್ರ ಕುಟುಂಬಸ್ಥರು ಪ್ರತಿಭಟನೆ ನಡೆಸಿದರು. ಈ ಸಂದರ್ಭ ಮಾತನಾಡಿದ ಎಂ.ಬಿ. ಸುಬ್ಬಯ್ಯ, ಎಂ.ಕೆ.ಈರಪ್ಪ, ಬೇಬಿ ಹಾಗೂ ಎಂ.ಕೆ.ಪೊನ್ನಪ್ಪ, ಗ್ರಾಮದಲ್ಲಿ ಸೇತುವೆ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿ ರುವದರಿಂದ ಸಂಕಷ್ಟ ಎದುರಿಸು ವಂತಾಗಿದ್ದು, ವಯೋವೃದ್ಧರು ಮತ್ತು ವಿದ್ಯಾರ್ಥಿಗಳು ಸಂಚರಿಸಲು ತುಂಬಾ ತೊಂದರೆಯಾಗಿದೆ. ಕಳೆದ ಐದು ವರ್ಷಗಳಿಂದ ಸೇತುವೆಯ ಕಾಮಗಾರಿಯನ್ನು ಪೂರ್ಣಗೊಳಿಸದ ಸರ್ಕಾರ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯವನ್ನು ಖಂಡಿಸಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವದಾಗಿ ಎಚ್ಚರಿಸಿದರು. ಸೇತುವೆ ದುರಸ್ತಿ ್ತಪಡಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳುವದಾಗಿ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಹಿರಿಯರಾದ ಗಣಪತಿ, ಮಾದಪ್ಪ, ಉಲ್ಲಾಸ, ಸದಾ, ರಾಘವಯ್ಯ, ಉತ್ತಪ್ಪ, ಶಾರದಾ, ಗಾನವಿ, ವನಿತಾ, ಲೀಲಾವತಿ, ಸೀತಮ್ಮ, ಹರೀಶ್, ಲೋಕೇಶ್ ಉತ್ತಪ್ಪ, ತೀರ್ಥಕುಮಾರ್, ನಯನ, ಜಾಜಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
- ದುಗ್ಗಳ ಸದಾನಂದ