ವೀರಾಜಪೇಟೆ, ಏ. 13: ವಿರಾಜಪೇಟೆಯ ಫೀಲ್ಡ್ ಮಾರ್ಷಲ್ ಹಾಕಿ ಟ್ರಸ್ಟ್ ವತಿಯಿಂದ 25ನೇ ವರ್ಷದ ಹಾಕಿ ತರಬೇತಿ ಶಿಬಿರದ ಪ್ರಯುಕ್ತ ಹಾಕಿ ಪಂದ್ಯಾಟವನ್ನು ವೀರಾಜಪೇಟೆಯ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ತಾ. 20 ಮತ್ತು 21ರಂದು ಏರ್ಪಡಿಸಲಾಗಿದೆ. ಈ ಪಂದ್ಯಾಟವು ಕೊಡಗಿನ ವಿವಿಧ ಸ್ಥಳಗಳಲ್ಲಿ ಸಂಘ - ಸಂಸ್ಥೆಗಳಿಂದ ಶಾಲಾ ಬಾಲಕರಿಗೆ ಹಾಕಿ ತರಬೇತಿಯನ್ನು ಹಮ್ಮಿಕೊಂಡಿರು ವಂತಹ ತಂಡಗಳಿಗೆ ಮಾತ್ರ ಸೀಮಿತವಾಗಿರುವದಾಗಿ ಟ್ರಸ್ಟ್‍ನ ಅಧ್ಯಕ್ಷ ಡಾ. ಎಂ.ಸಿ. ಕಾರ್ಯಪ್ಪ ತಿಳಿಸಿದ್ದಾರೆ.
ಪ್ರತಿ ಸಂಘ ಸಂಸ್ಥೆಗಳಿಂದ ತಲಾ ಒಂದೊಂದು ತಂಡವನ್ನು ಆಯ್ಕೆ ಮಾಡಿ ತಾ. 16ರೊಳಗೆ ತಮ್ಮ ಪ್ರವೇಶ ಪತ್ರವನ್ನು ಕಳುಹಿಸಿಕೊಡುವಂತೆ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಾರ್ಯ ದರ್ಶಿ ಸಂಪಿ ಪೂಣಚ್ಚ (9482246390, 8317397184) ಇವರನ್ನು ಸಂಪರ್ಕಿಸಬಹುದು. ಭಾಗವಹಿಸುವ ತಂಡಗಳು ಅದ್ಯಕ್ಷರು ಅಥವಾ ಕಾರ್ಯದರ್ಶಿಗಳು, ವೀರಾಜಪೇಟೆ ನರ್ಸಿಂಗ್ ಹೋಮ್, ಕಾರು ನಿಲ್ದಾಣ, ವೀರಾಜಪೇಟೆ ಈ ವಿಳಾಸಕ್ಕೆ ಪ್ರವೇಶ ಪತ್ರವನ್ನು ಕಳುಹಿಸಿಕೊಡುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.