ಹೊದ್ದೂರು, ಏ. 13: ಹೊದ್ದೂರು ಗ್ರಾಮದಲ್ಲಿ ನೆಲೆನಿಂತಿರುವ ಅಂಜಿತಲೆ ದೇವರೆಂದೇ ಪ್ರಖ್ಯಾತವಾದ ವಿವಿಧ ದೈವ ಕೋಲಗಳು ಶಕ್ತಿ-ಭಕ್ತಿಯಿಂದ ವಿಜೃಂಭಿಸಿದವು.

ಶ್ರೀ ಭಗವತಿ ದೇವಿಯು ಕಾವೇರಿ ಹೊಳೆಯಲ್ಲಿ ಜಳಕ ಮಾಡಿ, ದೇವಸ್ಥಾನದ ಸುತ್ತಲೂ ನರ್ತಿಸಿದ ನೋಟ ಭಕ್ತರನ್ನು ರೋಮಾಂಚನ ಗೊಳಿಸುವಂತಿತ್ತು.

ಇನ್ನುಳಿದಂತೆ ಕಲ್ಯಾಟಜ್ಜಪ್ಪ ಕೋಲ, ಭದ್ರಕಾಳಿ ಹಾಗೂ ಭೀರಳಿ ದೈವ ಕೋಲಗಳ ಆರಾಧನೆ ಸೇರಿದಂತೆ, ವಿಷ್ಣುಮೂರ್ತಿ ದೇವರು ಕೊಂಡ ಬೀಳುವ ಮೇಲೇರಿ, ಭಾರಣಿ ಸೇರಿದಂತೆ, ದೈವನೆಲೆಯ ವಿವಿಧ ಕೋಲಗಳು ಶಕ್ತಿ-ಭಕ್ತಿಯೊಂದಿಗೆ ನೆರೆದಿದ್ದ ಸಹಸ್ರಾರು ಗ್ರಾಮ ಭಕ್ತರನ್ನು ಭಕ್ತಿ ಪರಾಕಷ್ಟೇಯತ್ತ ಕೊಂಡೊ ಯ್ಯುವಂತೆ ಭಾಸವಾಗುತಿತ್ತು. ನೆರೆದಿದ್ದ ಭಕ್ತರು ದೈವ ಕೋಲದ ಆರಾಧನೆಯನ್ನು ಕಣ್ಣು ತುಂಬಿಸಿಕೊಳ್ಳುವದರ ಮೂಲಕ ವಾರದ ಹಬ್ಬ ವಿಜೃಂಭಣೆಯಿಂದ ಸಂಪನ್ನ ಗೊಂಡಿತ್ತು.

- ಕೂಡಂಡ ಸಾಬ ಸುಬ್ರಮಣಿ