ವೀರಾಜಪೇಟೆ, ಏ. 14: ವೀರಾಜಪೇಟೆ ಬಳಿಯ ಹೆಗ್ಗಳ ಗ್ರಾಮದ ತೋಟವೊಂದರ ಕೊಟ್ಟಿಗೆಯಲ್ಲಿ ಸೇರಿಕೊಂಡಿದ್ದ ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಬಿಟ್ಟಂಗಾಲದ ಸ್ನೇಕ್ ಗಗನ್ ಹಾಗೂ ಸ್ನೇಕ್ ಮಹೇಶ್ ಸುಮಾರು 90 ನಿಮಿಷಗಳ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದು ಕೊಡಗು ಕೇರಳ ಗಡಿಪ್ರದೇಶವಾದ ಪೆರುಂಬಾಡಿಯ ಅರಣ್ಯದೊಳಗೆ ಬಿಟ್ಟಿದ್ದಾರೆ. ಕಾಫಿ ತೋಟ ದೊಳಗೆ ಕಾರ್ಮಿಕರು ಸಂಚರಿಸುತ್ತಿದ್ದ ವೇಳೆ ಬುಸುಗುಡುತ್ತಾ ಪೊದೆಯೊಳಗಿದ್ದ ಸುಮಾರು 12 ಅಡಿ ಉದ್ದದ ಈ ಕಾಳಿಂಗ ಸರ್ಪ ಆತಂಕ ಸೃಷ್ಟಿಸಿತ್ತು.