ಗೋಣಿಕೊಪ್ಪಲು, ಏ. 14: ವೀರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಬುಟ್ಟಿಯಂಡ ಜಿಮ್ಮಿ ಅಚ್ಚಪ್ಪ ಮತ್ತು ಅಶ್ವಿನಿ ಅಚ್ಚಪ್ಪ ಜ್ಞಾಪಕಾರ್ಥ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜು ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.
ಫೈನಲ್ ಪಂದ್ಯದಲ್ಲಿ ಮೂರ್ನಾಡು ಪ್ರಥಮ ದರ್ಜೆ ಕಾಲೇಜು ತಂಡವನ್ನು 6-4 ಗೋಲುಗಳಿಂದ ಮಣಿಸುವ ಮೂಲಕ ಈ ಸಾಧನೆ ಮಾಡಿತು. ವಿಜೇತ ತಂಡದ ಪರವಾಗಿ ದರ್ಶನ್ 3, ಉತ್ತಯ್ಯ, ಬೆಳ್ಯಪ್ಪ, ಕವನ್ ತಲಾ ಒಂದೊಂದು ಗೋಲು ಬಾರಿಸಿದರು. ಬೆಸ್ಟ್ ಫಾರ್ವಡ್ ಪ್ರಶಸ್ತಿಯನ್ನು ಗೋಣಿಕೊಪ್ಪಲು ಕಾವೇರಿ ಕಾಲೇಜಿನ ತಂಡದ ನಾಯಕ ಕಾರ್ಲ್ ಕಾರ್ಯಪ್ಪ ಪಡೆದುಕೊಂಡರು. ದೈಹಿಕ ಶಿಕ್ಷಣ ನಿರ್ದೇಶಕರಾದ ಎಂ.ಎನ್. ಚಿಟ್ಯಪ್ಪ, ಎಂ.ಟಿ. ಸಂತೋಷ್ ತರಬೇತು ದಾರರಾದ ಮಿನ್ನಂಡ ಜೋಯಪ್ಪ ಹಾಗೂ ಚಿರಿಯಪ್ಪಂಡ ಸುಬ್ಬಯ್ಯ ಅವರನ್ನು ಪ್ರಾಂಶುಪಾಲೆ ಪ್ರೊ. ಎಸ್. ಆರ್. ಉಷಾಲತ ಅಭಿನಂದಿಸಿದರು.