ಗೋಣಿಕೊಪ್ಪ ವರದಿ, ಎ. 14 : ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ಮಂಗಳೂರು ವಲಯ ತಂಡಕ್ಕೆ ಆಟಗಾರರ ಆಯ್ಕೆ ಪ್ರಕ್ರಿಯೆ ಎಪ್ರಿಲ್ 15 ರಿಂದ ಅರಂಭಗೊಳ್ಳಲಿದೆ. 14 ವಯೋಮಿತಿ, 16 ಹಾಗೂ 19 ವಯೋಮಿತಿಯ ಆಟಗಾರರ ಆಯ್ಕೆ ಪ್ರತ್ಯೇಕವಾಗಿ ನಡೆಸಲಾಗುತ್ತದೆ.
ತಾ. 15 ರಂದು 14ರ ವಯೋಮಿತಿ ಒಳಗಿನ ಆಟಗಾರರ ಆಯ್ಕೆ ಮಡಿಕೇರಿ ಕೊಡಗು ವಿದ್ಯಾಲಯ ಮೈದಾನದಲ್ಲಿ ನಡೆಯಲಿದೆ. ಎಪ್ರಿಲ್ 16 ರಂದು ಗೋಣಿಕೊಪ್ಪ ಕಾಪ್ಸ್ ಶಾಲಾ ಮೈದಾನದಲ್ಲಿ 16 ವಯೋಮಿತಿಯ ಒಳಗಿನ ಆಟಗಾರರ ಆಯ್ಕೆ, ಎಪ್ರಿಲ್ 17 ರಂದು 19 ವಯೋಮಿತಿಯ ಒಳಗಿನ ಆಟಗಾರರ ಆಯ್ಕೆ ಮಡಿಕೇರಿ ಕೊಡಗು ವಿದ್ಯಾಲಯ ಮೈದಾನದಲ್ಲಿ ನಡೆಯಲಿದೆ. ಬೆಳಿಗ್ಗೆ 9 ಗಂಟೆಯಿಂದ ಆಯ್ಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಹೆಚ್ಚಿನ ಮಾಹಿತಿಗೆ 9448647465 ಸಂಖ್ಯೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಕೂರ್ಗ್ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಮಾಚಿಮಂಡ ಕುಮಾರ್ ಅಪ್ಪಚ್ಚು ತಿಳಿಸಿದ್ದಾರೆ.