ಗೋಣಿಕೊಪ್ಪ ವರದಿ, ಏ. 14: ಮಾಯಮುಡಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮೇ ತಿಂಗಳಿನಲ್ಲಿ ನಡೆಯಲಿರುವ ಬಾನಂಡ ಕ್ರಿಕೆಟ್ ಕಪ್ ಟೂರ್ನಿ ಯಶಸ್ವಿಗೆ ಸಂಪೂರ್ಣ ಸಹಕಾರ ನೀಡುವದಾಗಿ ಮಾಯಮುಡಿ ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದರು. ಅಂತರ್ ಅಮ್ಮಕೊಡವ ಕೌಟುಂಬಿಕ ಟೂರ್ನಿಗೆ ಮಾಯಮುಡಿ ಗ್ರಾಮಸ್ಥರ ಸಹಕಾರ ಪಡೆಯುವ ಚಿಂತನೆಯೊಂದಿಗೆ ಅಲ್ಲಿನ ಮಹಿಳಾ ಸಮಾಜ ಸಭಾಂಗಣದಲ್ಲಿ ಬಾನಂಡ ಕುಟುಂಬಸ್ಥರು ಗ್ರಾಮಸ್ಥರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಹಲವು ಸಂಘಟನೆಗಳ ಪ್ರಮುಖರು ಪಾಲ್ಗೊಂಡು ಸಹಕಾರ ನೀಡುವ ಭರವಸೆ ನೀಡಿದರು.

ಬಾನಂಡ ಕ್ರಿಕೆಟ್ ಕಪ್ ಸಮಿತಿ ಪ್ರಮುಖರಾದ ಬಾನಂಡ ಪ್ರತ್ಯು ಮಾತನಾಡಿದರು. ಕಾವೇರಿ ಅಸೋಸಿಯೇಷನ್ ಅಧ್ಯಕ್ಷ ಕಾಳಪಂಡ ಸುದೀರ್, ಟಿಪ್ಪು ಬಿದ್ದಪ್ಪ, ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಪ್ರಮುಖರುಗಳಾದ ಚೆಪ್ಪುಡೀರ ಪ್ರದೀಪ್, ಆಪಟ್ಟೀರ ಬೋಪಣ್ಣ ಸಲಹೆ ನೀಡಿದರು.