ಚೆಟ್ಟಳ್ಳಿ, ಏ. 14: ಕೊಡವರ ಹೊಸ ವರ್ಷವಾದ ಎಡಮ್ಯಾರ್ ಒಂದ್ ಆಚರಣೆಯನ್ನು ದಕ್ಷಿಣ ಕೊಡಗಿನ ಟಿ.ಶೆಟ್ಟಿಗೇರಿಯ ಕಾಯಂಕೊಲ್ಲಿನ ಮಚ್ಚಮಾಡ ರಮೇಶ್ ಅವರ ಗದ್ದೆಯಲ್ಲಿ ಜೋಡೆತ್ತನ್ನು ಸಾಂಕೇತಿಕವಾಗಿ ಉಳುವ ಮೂಲಕ ಕೊಡವ ಜನಾಂಗದ ಕಸುಬಾದ ಭತ್ತದ ಬೇಸಾಯಕ್ಕೆ ಚಾಲನೆ ನೀಡಲಾಯಿತು.
ಕೊಡವ ಮಕ್ಕಡ ಕೂಟ ಹಾಗೂ ಸ್ಥಳೀಯ ಊರಿನವರು ಬೆಳಿಗ್ಗೆ ಮಚ್ಚಮಾಡ ರಮೇಶ್ ಅವರ ಮನೆಯಲ್ಲಿ ಸೇರಿ ನೆಲ್ಲಕ್ಕಿಗೆ ಅಕ್ಕಿ ಹಾಕಿ ನಮಿಸಿ ಗದ್ದೆಗೆ ತೆರಳಿದರು. ಜೋಡೆತ್ತಿಗೆ ನೇಗಿಲು ನೊಗವನ್ನು ಸೇರಿಸಿ ಪೂಜೆಸಲ್ಲಿಸಿ ಭೂಮಿತಾಯಿಗೆ ಪೂಜೆಸಲ್ಲಿಸಿ ಉಳುಮೆಯ ಪ್ರಾರಂಭದ ದಿನವಾದ ಇಂದು ದೇವರು ಒಳಿತನ್ನು ಮಾಡಲೆಂದು ಹಿರಿಯರು ಪ್ರಾರ್ಥಿಸಿದರು. ಹಿರಿಯರು ಹಾಗೂ ಕೊಡವ ವiಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಜೋಡೆತ್ತಿನಿಂದ ಉಳುಮೆ ಮಾಡುವ ಮೂಲಕ ಎಡಮ್ಯಾರ್ ಒಂದ್‍ನ್ನು ಆಚರಿಸಿದರು.
ಬಳಿಕ ನಡೆದ ಕಾರ್ಯಕ್ರಮದಲ್ಲಿ ಕೊಡವ ವiಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಪ್ರ್ರಾಸ್ತಾವಿಕವಾಗಿ ಮಾತನಾಡಿ, ಕೊಡವ ಮಕ್ಕಡ ಕೂಟ ಹಲವು ಕಾರ್ಯಕ್ರಮವನ್ನು ನಡೆಸಿಕೊಂಡು ಬರುತಿದ್ದು ಚಲನಚಿತ್ರರಂಗದಲ್ಲಿ ನಟ ಹಾಗೂ ನಿರ್ದೇಶಕರಾಗಿರುವ ಕೊಟ್ಟ್ ಕತ್ತಿರ ಪ್ರಕಾಶ್ ಕಾರ್ಯಪ್ಪ ಪ್ರಾಯೋಜಿಸಿರುವ ಬರಹಗಾರ್ತಿ ಉಳುವಂಗಡ ಕಾವೇರಿ ಉದಯ್ ಬರೆದಿರುವ ಕೊಡಗ್‍ರ ಸಿಪಾಯಿ ಹಾಗೂ ಚಿಗುಲೆಗೆಗಳು ಎಂಬ 23 ಹಾಗೂ 24ನೇ ಹೆಜ್ಜೆಯ ಪುಸ್ತಕ ಬಿಡುಗಡೆಗೊಳಿಸಲಾಗುತ್ತಿದೆ ಎಂದರು. ಎಡಮ್ಯಾರ್ ಒಂದ್ ಆಚರಣೆಯ ಬಗ್ಗೆ ಬರಹಗಾರ್ತಿ ಉಳುವಂಗಡ ಕಾವೇರಿ ಉದಯ್ ವಿಚಾರ ಮಂಡನೆ ಮಾಡಿದರು. ಮಚ್ಚಮಾಡ ಕಾಂತಿ ರಮೇಶ್ ಪರಿಚಯಿಸಿದರು. ಸಮಾಜ ಸೇವಕರಾದ ಮಚ್ಚಮಾಡ ಸೋಮಯ್ಯ ಕೊಡಗರ ಸಿಪಾಯಿ ಪುಸ್ತಕ ಬಿಡುಗಡೆಗೊಳಿಸಿದರು. ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಚಿಮ್ಮಂಗಡ ಗಣೇಶ್ ಕೊಡಗು ಪ್ರೆಸ್‍ಕ್ಲಬ್‍ನ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿದರು.
ಅತಿಥಿಗಳಾಗಿದ್ದ ಕಾರ್ಯಕ್ರಮದ ಸಂಚಾಲಕ ಹಾಗೂ ಕೊಡವ ಮಕ್ಕಡ ಕೂಟದ ಉಪಾಧ್ಯಕ ್ಷ(ದಕ್ಷಿಣ ಕೊಡಗು) ಚೆಪ್ಪುಡಿರ ರಾಕೇಶ್ ದೇವಯ್ಯ, ಕಾರ್ಯದರ್ಶಿ ಪುತ್ತರಿರ ಕಾಳಯ್ಯ, ಬೊಳ್ಳಜಿರ ಸುಶೀಲ ಅಶೋಕ್ ಮಾತನಾಡಿ ಕೊಡವ ಸಂಸ್ಕ್ರತಿ ಆಚಾರ ವಿಚಾರ ಉಳಿಸಿ ಬೆಳೆಸುವಲ್ಲಿ ಎಲ್ಲರು ಕೈಜೋಡಿಸ ಬೇಕೆಂದರು. ಬೊಳ್ಳಜಿರ ದೇಚಮ್ಮ ಅಯ್ಯಪ್ಪ ಪ್ರಾರ್ಥಿಸಿ ಬೊಳ್ಳಜಿರ ಯಮುನಾ ಅಯ್ಯಪ್ಪ ನಿರೂಪಿಸಿ ವಂದಿಸಿದರು.