ಕುಶಾಲನಗರ, ಏ 14: ಅಂಗಡಿ ಮಳಿಗೆ ಎದುರು ಬಿದ್ದಿದ್ದ ಮಹಿಳೆಯೊಬ್ಬರ ಚಿನ್ನದ ಬಳೆಯನ್ನು ಪತ್ರಿಕಾ ಏಜೆಂಟ್‍ವೊಬ್ಬರು ಕಳೆದುಕೊಂಡವರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಘಟನೆ ಕುಶಾಲನಗರದಲ್ಲಿ ನಡೆದಿದೆ. ಕುಶಾಲನಗರದ ಕಾರು ನಿಲ್ದಾಣದ ಸಮೀಪ ಪತ್ರಿಕೆ ವಿತರಿಸುತ್ತಿರುವ ಹಿರಿಯ ಏಜೆಂಟ್ ವಿ.ಪಿ. ಪ್ರಕಾಶ್ ಅವರಿಗೆ ಮಹಿಳೆಯೊಬ್ಬರ ಚಿನ್ನದ ಬಳೆ ಬಿದ್ದು ಸಿಕ್ಕಿದೆ. ಅದನ್ನು ವಾರಸುದಾರರಿಗೆ ನೀಡಲು ಹುಡುಕಾಟ ನಡೆಸುತ್ತಿದ್ದ ಸಂದರ್ಭ ಬಳೆಯ ವಾರಸುದಾರರಾದ ಕೂಡಿಗೆಯ ಮಹಿಳೆಯೊಬ್ಬರು ಬಂದು ಬಳೆ ಕಳೆದುಕೊಂಡಿರುವದಾಗಿ ತಿಳಿಸಿದ ಮೇರೆಗೆ ಪ್ರಕಾಶ್ ಅಂದಾಜು 50 ಸಾವಿರ ರೂ. ಗಳಿಗೂ ಅಧಿಕ ಮೌಲ್ಯದ ಚಿನ್ನದ ಬಳೆಯನ್ನು ಮಹಿಳೆಗೆ ತಲಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.