ಗೋಣಿಕೊಪ್ಪಲು, ಏ. 14: ಇತ್ತೀಚೆಗೆ ಚಿಕ್ಕಅಳುವಾರ ಕಾಲೇಜಿನ ಸ್ನಾತಕೋತ್ತರ ಎಂ.ಎಸ್ಸಿ ವಿಭಾಗದಿಂದ ಆಯೋಜಿಸಲಾಗಿದ್ದ ಕಂಪ್ಯೂಟರ್ ಸೈನ್ಸ್ ಫೆಸ್ಟ್‍ನಲ್ಲಿ ನಡೆದÀ 5 ಸ್ಪರ್ಧೆಗಳಲ್ಲೂ ಗೋಣಿಕೊಪ್ಪಲಿನ ಕಾವೇರಿ ಕಾಲೇಜು ಬಿಸಿಎ ವಿಭಾಗದ ವಿದ್ಯಾರ್ಥಿಗಳು ಪ್ರಶಸ್ತಿಯನ್ನು ಪಡೆದುಕೊಳ್ಳವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
ಪ್ರೊಡಕ್ಟ್ ಲಾಂಚ್ ಸ್ಪರ್ಧೆಯಲ್ಲಿ ವಿಬಿಶ್ ಮತ್ತು ದೇಚಮ್ಮ ಪ್ರಥಮ ಸ್ಥಾನ, ಆಶು ನಟನೆ ಸ್ಪರ್ಧೆಯಲ್ಲಿ ದೇಚಮ್ಮ, ಶ್ವೇತ, ಮೇಘ ಪ್ರಥಮ ಸ್ಥಾನ, ಕಾವೇರಮ್ಮ, ಚೇತನ್, ನವ್ಯ ದ್ವಿತೀಯ ಸ್ಥಾನ, ಕೋಡಿಂಗ್ ಸ್ಪರ್ಧೆಯಲ್ಲಿ ವಿಬೀಶ್ ದ್ವಿತೀಯ ಸ್ಥಾನ, ಪ್ರಬಂಧ ಸ್ಪರ್ಧೆಯಲ್ಲಿ ವಿಬೀಶ್ ಪ್ರಥಮ ಸ್ಥಾನ, ಕರೀಷ್ಮಾ ಸುಧೀರ್ ದ್ವಿತೀಯ ಸ್ಥಾನ, ರಸಪ್ರಶ್ನೆಯಲ್ಲಿ ಮೇಘ ಮತ್ತು ಶ್ವೇತ ದ್ವಿತೀಯ ಸ್ಥಾನ ಪಡೆದು ಕೊಂಡಿದ್ದಾರೆ. ಬಿಸಿಎ ವಿಭಾಗದ ಮುಖ್ಯಸ್ಥ ಯು.ಟಿ. ಪೆಮ್ಮಯ್ಯ ಅವರ ಮಾರ್ಗದರ್ಶನ ದಲ್ಲಿ ಈ ಸಾಧನೆ ಮಾಡಲಾಗಿದೆ ಎಂದು ಪ್ರಾಂಶುಪಾಲೆ ಪ್ರೊ. ಎಸ್.ಆರ್. ಉಷಾಲತ ತಿಳಿಸಿದ್ದಾರೆ.