ಮಡಿಕೇರಿ, ಏ. 14: ಸ್ಥಳೀಯ ಸದ್ಗುರು ಅಪ್ಪಯ್ಯ ಸ್ವಾಮಿ ಪ್ರೌಢಶಾಲೆಯಲ್ಲಿ 30 ವರ್ಷಗಳವರೆಗೆ ನಾಲ್ಕನೇ ದರ್ಜೆ ನೌಕರನಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಹೆಚ್.ಕೆ. ಸೋಮಣ್ಣ ಅವರನ್ನು ಶಾಲೆಯಿಂದ ಬೀಳ್ಕೊಡಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲೆಯ ವ್ಯವಸ್ಥಾಪಕ ಎಂ.ಬಿ. ಮೊಣ್ಣಪ್ಪ ವಹಿಸಿದ್ದರು. ಆಡಳಿತ ಮಂಡಳಿ ಸದಸ್ಯ ಬಿ.ವಿ. ಅರುಣಕುಮಾರ್, ಶಿಕ್ಷಕರುಗಳಾದ ಸಿ. ದುರ್ಗೇಶ್, ಎಸ್.ಎಸ್. ಶಿವಪ್ರಸಾದ್, ಎನ್. ಪುಷ್ಪ, ಸಿ.ಎಂ. ಸುಲೋಚನ, ಎ.ಪಿ. ಸೋಮಯ್ಯ, ಸುರೇಶ್, ಪೋಷಕ ಪರಿಷತ್ತಿನ ವೆಂಕಟೇಶ್, ಮುಖ್ಯೋಪಾಧ್ಯಾಯಿನಿ ಎ.ಬಿ. ಸ್ವಾತಿ ಮೊದಲಾದವರು ಮಾತನಾಡಿದರು. ಎನ್. ಪುಷ್ಪ ಸ್ವಾಗತಿಸಿ, ನಿರೂಪಿಸಿದರು.