ಮಡಿಕೇರಿ, ಏ. 14: ಲೋಕಸಭಾ ಚುನಾವಣೆ ಸಂಬಂಧ ಕೊಡಗು -ಮೈಸೂರು ಲೋಕಸಭಾ ಕ್ಷೇತ್ರದಲ್ಲಿ 22 ಮಂದಿ ಕಣದಲ್ಲಿರುವ ಹಿನ್ನೆಲೆ ಹೆಚ್ಚುವರಿ ವಿದ್ಯುನ್ಮಾನ ಮತಯಂತ್ರಗಳ ರ್ಯಾಂಡಮೈಸೇಷನ್ ಪ್ರಕ್ರಿಯೆಯು (ಸಮ್ಮಿಶ್ರಣ) ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಜಿಲ್ಲಾಡಳಿತ ಭವನದ ರಾಷ್ಟ್ರೀಯ ಮಾಹಿತಿ ಕೇಂದ್ರದಲ್ಲಿ ನಡೆಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ವಿದ್ಯುನ್ಮಾನ ಮತ ಯಂತ್ರಗಳ ನೋಡಲ್ ಅಧಿಕಾರಿ ಇಬ್ರಾಹಿಂ, ರಾಷ್ಟ್ರೀಯ ಮಾಹಿತಿ ಕೇಂದ್ರದ ಅಧಿಕಾರಿ ಅಜಿತ್, ಹೇಮಂತ್ ಕುಮಾರ್ ಇತರರು ಪಾಲ್ಗೊಂಡಿದ್ದರು.