ಕೂಡಿಗೆ, ಏ. 14: ಕೂಡಿಗೆ ಫ್ರೆಂಡ್ಸ್ ತಂಡದವರು ಆಯೋಜಸಿದ ವಾಲಿಬಾಲ್ ಪಂದ್ಯಾಟದಲ್ಲಿ ಹುಲುಸೆ ತಂಡ ಪ್ರಥಮ ಸ್ಥಾನಗಳಿಸಿ ನಗದು ಹಾಗೂ ಟ್ರೋಫಿ ತನ್ನದಾಗಿಸಿಕೊಂಡಿದೆ. ದ್ವಿತೀಯ ಸ್ಥಾನವನ್ನು ಕೂಡಿಗೆ ಫ್ರೆಂಡ್ಸ್ ತಂಡ ಪಡೆದಿದೆ.
ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೂಡಿಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಪಿ. ಹಮೀದ್ ವಹಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ದಲಿತ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಅಣ್ಣಯ್ಯ, ಹರೀಶ್, ಸನ್ನಿ, ಪಾಪಚ್ಚ, ಗೋಲ್ಡನ್ ಈಗಲ್ ವಾಲಿಬಾಲ್ ಅಸೋಸಿಯೇಷನ್‍ನ ನಿರ್ದೇಶಕ ಚಂದ್ರು, ಸೋಮಶೇಖರ್, ಕೂಡಿಗೆ ಪ.ಪೂ. ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ.ಕೆ. ನಾಗರಾಜಶೆಟ್ಟೆ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು. ಪಂದ್ಯದಲ್ಲಿ 8 ತಂಡಗಳು ಭಾಗವಹಿಸಿದ್ದವು.