ಮಡಿಕೇರಿ, ಏ. 14: ಸೌರಮಾನ ಪಂಚಾಂಗದ ಪ್ರಕಾರ ಕೊಡವ ಬುಡಕಟ್ಟು ಲೋಕದ ಹೊಸ ವರ್ಷ ಎಡಮ್ಯಾರ್ ಪ್ರಯುಕ್ತ 14ರಂದು ಮುಂಜಾನೆ ಸಿ.ಎನ್.ಸಿ ಅಧ್ಯಕ್ಷ ಎನ್.ಯು ನಾಚಪ್ಪ ನೇತೃತ್ವದಲ್ಲಿ ಎಡಮ್ಯಾರ್ ಆಚರಣೆ ನಡೆಯಿತು. ಚಿಕ್ಕಬೆಟ್ಟಗೇರಿ ಗ್ರಾಮದ ನಂದಿನೆರವಂಡ ಉತ್ತಪ್ಪ ಅವರ ಗದ್ದೆಯಲ್ಲಿ ಜೋಡೆತ್ತಿನ ಮೂಲಕ ಸಕಲ ಸಾಂಪ್ರ್ರದಾಯಿಕ ವಿಧಿ ವಿಧಾನಗಳಂತೆ ಭತ್ತದ ಗದ್ದೆ ಉಳುಮೆ (ಹೊನ್ನಾರು) ಕಾರ್ಯ ನಡೆಸಲಾಯಿತು.