ಗೋಣಿಕೊಪ್ಪ ವರದಿ, ಎ. 15 : ಭಾರತೀಯ ಜನತಾ ಪಕ್ಷದ ವತಿಯಿಂದ ಪಟ್ಟಣದಲ್ಲಿ ರೋಡ್‍ಶೋ ನಡೆಸುವ ಮೂಲಕ ಚುನಾವಣಾ ಪ್ರಚಾರ ನಡೆಸಲಾಯಿತು. ಶಾಸಕ ಕೆ.ಜಿ. ಬೋಪಯ್ಯ ನೇತೃತ್ವದಲ್ಲಿ ಉಮಾಮಹೇಶ್ವರಿ ದೇವಸ್ಥಾನದವರೆಗೆ ಮೆರವಣಿಗೆ ತೆರಳಿ ನಂತರ ಕಚೇರಿಯಲ್ಲಿ ಪ್ರಚಾರ ಸಭೆ ನಡೆಸಲಾಯಿತು. ಶಾಸಕ ಕೆ. ಜಿ. ಬೋಪಯ್ಯ, ಲೋಕಸಭಾ ಚುನಾವಣೆ ಸವಾಲಿನ ಚುನಾವಣೆಯಾಗಿದೆ. ದೇಶದ್ರೋಹಿಗಳ ವಿರುದ್ದ ನಿಂತಿರುವ ದೇಶ ಭಕ್ತರ ಪರವಾಗಿ ನಿಲ್ಲಲು ಬಿಜೆಪಿ ಸನ್ನದ್ಧವಾಗಿದೆ. ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಜನ್ಮ ದಿನಾಚಣೆ ಆಚರಿಸಿಕೊಳ್ಳುತ್ತಿದ್ದೇವೆ ಸಂವಿಧಾನ ರಕ್ಷಣೆಯನ್ನು ಮಾಡಲು ನಾವು ಮುಂದಾಗಿದ್ದೇವೆ. ಆದರೆ, ಕಾಶ್ಮಿರಕ್ಕೆ ಪ್ರತ್ಯೇಕ ಪ್ರಧಾನಿ ಬೇಕು ಎಂಬ ಒತ್ತಾಯಗಳು ಕೇಳಿ ಬರುತ್ತಿರುವದನ್ನು ಅವಲೋಕಿಸಿದಾಗ ಅಂಬೇಡ್ಕರ್ ಅವರ ಸಂವಿದಾನದ ಕನಸನ್ನು ಎತ್ತ ಕೊಂಡೊಯ್ಯುತ್ತಿದ್ದಾರೆ ಎಂಬುವದು ಮನವರಿಕೆಯಾಗುತ್ತಿದೆ ಎಂದರು.