ಚೆಟ್ಟಳ್ಳಿ ಏ. 15 : ಲೋಕಸಭಾ ಚುನಾವಣೆಗೆ ಕೊಡಗು-ಮೈಸೂರು ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸಿ.ಎಚ್ ವಿಜಯಶಂಕರ್ ಪರವಾಗಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಚೆಟ್ಟಳ್ಳಿ ಸುತ್ತ ಮುತ್ತಲು ಅಬ್ಬರದ ಪ್ರಚಾರ ನಡೆಸಿದರು.
ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ಮುಖಂಡ ಟಿ.ಪಿ ರಮೇಶ್ ಕಳೆದ ಐದು ವರ್ಷಗಳಿಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬರೀ ಸುಳ್ಳು- ಪೊಳ್ಳುಗಳನ್ನು ಹೇಳಿ ಜನರಿಗೆ ಮೋಸ ಮಾಡಿದೆ ಎಂದರು. ಕೊಡಗು -ಮೈಸೂರು ಕ್ಷೇತ್ರದ ಸಂಸದಾರದ ಪ್ರತಾಪ್ ಸಿಂಹ ಯಾವುದೇ ಅಭಿವೃದ್ಧಿಯನ್ನು ಮಾಡದೇ, ಕಾಂಗ್ರೆಸ್ ಸರ್ಕಾರ ಮಾಡಿದ ಕೆಲಸ ತಾನು ಮಾಡಿದ ಕೆಲಸ ಎಂದು ನಡೆಯುತಿ ್ತದ್ದರೆ ಇವರಿಗೆ ಈ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯೆಕ್ಷೆ ಸುರಯ್ಯಾ ಅಬ್ರಾರ್,ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ರೂ ರವೀಂದ್ರ, ಉಪಾಧ್ಯಕ್ಷ ಪೇಟ್ರಿಕ್ ಲೋಬೋ, ಜಿಲ್ಲಾ ಪಂಚಾಯತ್ ಸದಸ್ಯೆ ಸುನಿತಾ ಮಂಜುನಾಥ್, ಚೆಟ್ಟಳ್ಳಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಪಪ್ಪು ತಿಮ್ಮಯ್ಯ, ಚೆಟ್ಟಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ವತ್ಸಲ,ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ತೀರ್ಥಕುಮಾರ್, ಸದಸ್ಯರಾದ ಮೊಹಮ್ಮದ್ ರಫಿ, ಸಿಂಧೂ ಇದ್ದರು.