ಮಡಿಕೇರಿ, ಏ. 15: ನಮ್ಮ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರವು ಸೇರಿದಂತೆ ತಾ. 18 ರಂದು ದೇಶದ ಅನೇಕ ಕಡೆಗಳಲ್ಲಿ ದ್ವಿತೀಯ ಹಂತದ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ತಾ. 16 ರಂದು (ಇಂದು) ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು, ಸಂಜೆ 6 ಗಂಟೆಯ ಬಳಿಕ ಎಲ್ಲ ರೀತಿಯ ಬಹಿರಂಗ ಪ್ರಚಾರ ನಿಷೇಧಗೊಂಡಿರುತ್ತದೆ. ಚುನಾವಣಾ ಆಯೋಗದ ಪ್ರಕಾರ ರೇಡಿಯೋ, ಟೆಲಿವಿಷನ್, ಕೇಬಲ್ ನೆಟ್‍ವರ್ಕ್ ಸೇರಿದಂತೆ ಇತರೆ ಮಾಧ್ಯಮಗಳಲ್ಲಿ ಚುನಾವಣೆ ಸಂಬಂಧದ ಚರ್ಚೆ, ಪ್ರಚಾರ, ಸಂದರ್ಶನ ಹಾಗೂ ಈ ಸಂಬಂಧ ಯಾವದೇ ಅಭಿಪ್ರಾಯಗಳ ಪ್ರಸಾರ ನಿಷೇಧಿಸಲ್ಪಡಲಿವೆ.ತಾ. 16 ರಂದು (ಇಂದು) ಸಂಜೆ 6 ಗಂಟೆಯಿಂದ ತಾ. 18ರ ಮಧ್ಯರಾತ್ರಿಯ ತನಕ ಎಲ್ಲೆಡೆ ಮದ್ಯಪಾನ ನಿಷೇಧದೊಂದಿಗೆ ಸಂತೆ, ಜಾತ್ರೆ, ಉತ್ಸವಗಳನ್ನು ಚುನಾವಣಾ ದಿವಸ ಮುಂದೂಡಲಾಗಿದೆ. ಇನ್ನು ತಾ. 17 ಹಾಗೂ 18 ರಂದು ಜಾಹೀರಾತು ಪ್ರಕಟಿಸಲು ಸಂಬಂಧಿಸಿದ ಅಧಿಕಾರಿಗಳಿಂದ ಕಡ್ಡಾಯ ಅನುಮತಿಗೆ ಸೂಚಿಸಲಾಗಿದೆ.

ಅಭ್ಯರ್ಥಿಗಳ ಬೂತ್‍ಗಳು: ಸ್ಪರ್ಧಿಸಿರುವ ಅಭ್ಯರ್ಥಿಗಳು ಮತಗಟ್ಟೆ ಸ್ಥಳದಿಂದ ಕನಿಷ್ಟ ಎರಡು ನೂರು ಮೀಟರ್ ದೂರದಲ್ಲಿ ತಮ್ಮ ಬೂತ್ ಸ್ಥಾಪಿಸಲು ಮಾತ್ರ ಅವಕಾಶವಿದೆ. ಯಾವದೇ ರೀತಿಯ ಪ್ರಚಾರವನ್ನು ಮಾಡುವಂತಿಲ್ಲ. ಮತದಾರರಿಗೆ ನೀಡುವ ಸ್ಲಿಪ್‍ನಲ್ಲಿ ಅವರು ಮತದಾರರ ಭಾಗ ಸಂಖ್ಯೆ, ಕ್ರಮಸಂಖ್ಯೆ ಮತ್ತು ಹೆಸರನ್ನು ಮಾತ್ರ ಬರೆಯಬಹುದಾಗಿದ್ದು ಯಾವದೇ ರೀತಿಯ ಚಿಹ್ನೆಗಳು, ಅಭ್ಯರ್ಥಿಗಳ ಭಾವಚಿತ್ರಗಳು ಇರದಂತೆ ಎಚ್ಚರ ವಹಿಸಲು ಸೂಚಿಸಿದೆ. 2 ಚೇರ್, 1 ಮೇಜು, 3x4 ಳಿ ಅಡಿ ಬ್ಯಾನರ್‍ಗಳನ್ನು ಹಾಕಿಕೊಳ್ಳಲು ಅವಕಾಶವಿದ್ದು ಚುನಾವಣಾಧಿಕಾರಿ ಹಾಗೂ ಸ್ಥಳೀಯ ಪ್ರಾಧಿಕಾರದ ಅನುಮತಿ ಪಡೆಯಬೇಕು.

ಏಜೆಂಟ್ ನೇಮಕಾತಿ: ಎಲ್ಲಾ ಅಭ್ಯರ್ಥಿಗಳು ಮತಗಟ್ಟೆಗೆ ಒಬ್ಬರಂತೆ ಮತದಾನ ಎಜೆಂಟರನ್ನು ನೇಮಿಸಬಹುದಾಗಿದೆ. ಈ ಏಜೆಂಟರು ಮತಗಟ್ಟೆಯಲ್ಲಿ ಕುಳಿತುಕೊಳ್ಳಲು ಮತದಾನಾಧಿಕಾರಿಗಳು ಅವಕಾಶವನ್ನು ಮಾಡಿಕೊಡುತ್ತಾರೆ. ಬದಲಿ ಏಜೆಂಟನ್ನು ನೇಮಿಸಿಕೊಂಡಿದ್ದರೂ ಸಹ ಏಕ ಕಾಲದಲ್ಲಿ ಒಬ್ಬ ಏಜೆಂಟ್ ಮಾತ್ರ ಮತಗಟ್ಟೆಯಲ್ಲಿ ಇರಲು ಅವಕಾಶವಿರುತ್ತದೆ.

ಕ್ಷೇತ್ರದ ಮತದಾರರಲ್ಲದ ವ್ಯಕ್ತಿಗಳು ಬಹಿರಂಗ ಪ್ರಚಾರದ ಅವಧಿ ಮುಕ್ತಾಯಗೊಳ್ಳುತ್ತಿದ್ದಂತೆಯೇ ಮತಕ್ಷೇತ್ರವನ್ನು ಬಿಟ್ಟು ತೆರಳಲು ಭಾರತ ಚುನಾವಣಾ ಆಯೋಗದ ನಿರ್ದೇಶನವಿರುತ್ತದೆ.

ತಾ. 23 ರಂದು ಕೇರಳ ರಾಜ್ಯದಲ್ಲಿ ಮತದಾನವಿರುದರಿಂದ ಕೇರಳ ರಾಜ್ಯದ ಗಡಿಭಾಗದಿಂದ ಮೈಸೂರು ಜಿಲ್ಲೆಯ 5 ಕಿ.ಮೀ ವ್ಯಾಪ್ತಿಯವರೆಗೆ ಮದÀ್ಯಪಾನ ನಿಷೇಧ ಜಾರಿಯಲ್ಲಿರುತ್ತದೆ.

ಭದ್ರತಾ ವ್ಯವಸ್ಥೆ: ಮತದಾನದ ದಿನದಂದು ಪೊಲೀಸ್ ಸಿಬ್ಬಂದಿ ಸೇರಿದಂತೆ ಹೊಮ್ ಗಾರ್ಡ್, ಸಿ.ಆರ್.ಪಿ.ಎಸ್.

(ಮೊದಲ ಪುಟದಿಂದ) ಸಿಬ್ಬಂದಿಗಳನ್ನು ಭದ್ರತಾ ದೃಷ್ಟಿಯಿಂದ ನೇಮಕ ಮಾಡಲಾಗುತ್ತಿದ್ದು, ಮತಗಟ್ಟೆಗಳಲ್ಲಿ ಮೈಕ್ರೊ ಅಬ್ಸರ್ವರ್‍ಗಳ ನೇಮಕ ಹಾಗೂ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ.

ಪೂರಕ ದಾಖಲÉಗಳು: ಮತದಾನ ಮಾಡಲು ಮತಗಟ್ಟೆಗೆ ಬರುವ ಮತದಾರರು ಬsÁರತ ಚುನಾವಣಾ ಆಯೋಗವು ನೀಡಿರುವ ಮತದಾರರ ಭಾವಚಿತ್ರವುಳ್ಳ ಗುರುತಿನ ಚೀಟಿಯನ್ನು ಗುರುತಿಗಾಗಿ ಹಾಜರುಪಡಿಸುವದು. ಅದು ಇಲ್ಲವೆ ಮತದಾರರು ಈ ಕೆಳಕಂಡ 11 ದಾಖಲÉಗಳ ಪೈಕಿ ಯಾವದಾದರೂ ಒಂದು ದಾಖಲÉಯನ್ನು ಮತಗಟ್ಟೆ ಅದಿsಕಾರಿಗಳಿಗೆ ಗುರುತಿಗಾಗಿ ತೋರಿಸಬÉೀಕು. ಮತದಾರರ ಬsÁವಚಿತ್ರವಿರುವ ಅದಿsಕೃತ ವೋಟರ್ ಸ್ಲಿಫ್ ಕೂಡ ನೀಡಬಹುದು, ಉಳಿದಂತೆ, ಪಾಸ್‍ಪೆÇೀರ್ಟ್, ಡ್ರೈವಿಂಗ್ ಲÉೈಸನ್ಸ್, ರಾಜ್ಯ, ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ಉದ್ದಿಮೆಗಳು ಅಥವಾ ಇತರೆ ಖಾಸಗಿ ಔಧ್ಯಮಿಕ ಸಂಸ್ಥೆಗಳು ಅವರ ಕೆಲಸಗಾರರಿಗೆ ನೀಡಿರುವ ಬsÁವಚಿತ್ರವಿರುವ ಸೇವಾ ಗುರುತಿನ ಚೀಟಿಗಳು, ಸಾರ್ವಜನಿಕ ವಲಯದ ಬÁ್ಯಂಕ್, ಕಿಸಾನ್ ಮತ್ತು ಅಂಚೆ ಕಛೇರಿ ನೀಡಿರುವ ಬsÁವಚಿತ್ರವಿರುವ ಪಾಸ್ ಪುಸ್ತಕ, ಆದಾಯ ತೆರಿಗೆ ಗುರುತಿನ ಚೀಟಿ (ಪಾನ್), ರಾಷ್ಟ್ರೀಯ ಜನಸಂಖ್ಯೆ ನೋಂದಣಿ ವಹಿ ಎನ್‍ಪಿಆರ್ ಯೋಜನೆಯಡಿ ಆರ್‍ಜಿಐ ವಿತರಿಸಿರುವ ಸ್ಮಾರ್ಟ್ ಕಾರ್ಡಗಳು, ಎನ್‍ಆರ್‍ಇಜಿ ಯೋಜನೆಯ ಅಡಿಯಲ್ಲಿ ನೀಡಿರುವ ಬsÁವಚಿತ್ರವಿರುವ ಉದ್ಯೋಗ ಕಾರ್ಡ್, ಬsÁವಚಿತ್ರವಿರುವ ಆರೋಗ್ಯ ವಿಮಾ ಯೋಜನೆ ಸ್ಮಾರ್ಟ್ ಕಾರ್ಡ್‍ಗಳು (ಕಾರ್ಮಿಕ ಮಂತ್ರಾಲಯ ಯೋಜನೆ), ಸಕ್ಷಮ ಫ್ರಾದಿsಕಾರ ನೀಡಿರುವ ಬsÁವಚಿತ್ರವಿರುವ ಪಿಂಚಣಿ ಪಾವತಿ ಆದೇಶಗಳು, ಸಂಸದರು, ವಿಧಾನಸಭಾ ಸದಸ್ಯರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಸರ್ಕಾರದಿಂದ ನೀಡಿರುವ ಗುರುತಿನ ಚೀಟಿ, ಆಧಾರ್ ಕಾರ್ಡ್ ಇವು ಅನ್ವಯಿಸಲಿವೆ.

ರಾಜಕೀಯ ಚಟುವಟಿಕೆಗಳ ನಿಷೇಧ

48 ಗಂಟೆಯ ಮುಂಚಿತವಾಗಿ 21-ಮೈಸೂರು ಲೋಕಸಭಾ ಕ್ಷೇತ್ರದ ಮತದಾರರಲ್ಲದವರು ಬಹಿರಂಗ ಪ್ರಚಾರ ಅಂತ್ಯವಾದ ನಂತರ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗುವಂತಿಲ್ಲ ಆದ್ದರಿಂದ 21-ಮೈಸೂರು ಲೋಕಸಭಾ ಕ್ಷೇತ್ರದ ಮತದಾರರಲ್ಲದವರು ತಮ್ಮ ಕ್ಷೇತ್ರಕ್ಕೆ ತೆರಳತಕ್ಕದ್ದು. (ಚುನಾವಣಾ ಪ್ರಚಾರ ಉದ್ದೇಶಕ್ಕಾಗಿ ಬಂದಿರುವವರಿಗೆ ಮಾತ್ರ ಅನ್ವಯಿಸುವದು).

ಕಲ್ಯಾಣ ಮಂಟಪ, ಸಮುದಾಯಭವನ, ವಸತಿ ಗೃಹಗಳು, ಅತಿಥಿ ಗೃಹಗಳು (ಖಾಸಗಿ)ಗಳಲ್ಲಿ ಈ ಕ್ಷೇತ್ರದ ಮತದಾರರಲ್ಲದವರು ವಾಸ್ತವ್ಯ ಮಾಡಿರುವ ಬಗ್ಗೆ ಪರಿಶೀಲನೆ ನಡೆಸಲಾಗುವದು. 48 ಗಂಟೆಯ ಮುಂಚಿತವಾಗಿ ಲೌಡ್ ಸ್ಪೀಕರ್ ಅನುಮತಿ ಇರುವದಿಲ್ಲ.

ಮತಗಟ್ಟೆಯ 100 ಮೀ. ಸುತ್ತಳತೆಯಲ್ಲಿ ಪ್ರಚಾರ ಮಾಡುವಂತಿಲ್ಲ. ಮತದಾನದ ದಿನದಂದು ಚುನಾವಣೆಗೆ ಸಂಬಂಧಿಸಿದಂತೆ ಯಾವದೇ ರೀತಿಯ ವಿಚಾರಣೆ, ದೂರುಗಳನ್ನು 1950 ದೂರವಾಣಿ ಸಂಖ್ಯೆಯ ಮುಖಾಂತರ ನಿರ್ವಹಿಸಲಾಗುವದು.

ಮತದಾನದ ದಿನದಂದು ಪ್ರತಿ 2 ಗಂಟೆಯ ಮತದಾನದ ವರದಿಯನ್ನು ಮಾಧ್ಯಮ ಮತ್ತು ಪ್ರಮಾಣೀಕರಣ ಸಮಿತಿಯ ನೋಡಲ್ ಅಧಿಕಾರಿಯವರಿಂದ (ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ) ಪಡೆಯುವದು.

ಭದ್ರತಾ ಕೊಠಡಿ: ಮತದಾನವು ಪೂರ್ಣಗೊಂಡ ನಂತರ ಮೊಹರಾದ ವಿದ್ಯುನ್ಮಾನ ಮತಯಂತ್ರಗಳನ್ನು (ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್ ಮತ್ತು ವಿವಿಪ್ಯಾಟ್) ಹಾಗೂ ಚುನಾವಣಾ ಕಾಗದ ಪತ್ರಗಳನ್ನು ಡಿ.ಮಸ್ಟರಿಂಗ್ ಸ್ಥಳದಿಂದ ಮೈಸೂರುನಗರ ಪಡುವಾರಹಳ್ಳಿಯ ಮಹಾರಾಣಿ ಕಾಲೇಜಿನಲ್ಲಿ ಸ್ಥಾಪಿಸಿರುವ ಭದ್ರತಾ ಕೊಠಡಿಗೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯಲ್ಲಿ ಸಹಾಯಕ ಚುನಾವಣಾಧಿಕಾರಿಗಳು ತರಲಿರುವರು ಹಾಗೂ ಭದ್ರತಾ ಕೊಠಡಿಗೆ 3 ಟೈರ್ ಸಿಸ್ಟಮ್ ಭದ್ರತೆಯನ್ನು ಒದಗಿಸಲಾಗಿರುತ್ತದೆ (1ನೇ ಭದ್ರತೆಯನ್ನು ಸಿ.ಎ.ಪಿ.ಎಫ್ ತುಕಡಿಯಿಂದ 2ನೇ ಸಶಸ್ತ್ರ ಮೀಸಲು ಪಡೆಯು, 3ನೇ ಹಂತದಲ್ಲಿ ಸ್ಥಳೀಯ ಪೊಲೀಸ್‍ರವರಿಂದ ಭದ್ರತೆ ಒದಗಿಸ ಲಾಗುವದು) ಅಲ್ಲದೇ ಸಿ.ಸಿ.ಟಿ.ವಿ. ಕ್ಯಾಮರಾವನ್ನು ಅಳವಡಿಸ ಲಾಗಿದ್ದು ಹಾಗೂ ಭದ್ರತಾ ಕೊಠಡಿಯೊಳಗೆ ಪ್ರವೇಶಿಸುಸುವ ಮುನ್ನ ಲಾಗ್ ಬುಕ್‍ನಲ್ಲಿ ನಮೂದಿಸುವದನ್ನು ಕಡ್ಡಾಯಗೊಳಿಸಲಾಗಿರುತ್ತದೆ.

ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ತಾ. 18 ರಂದು ಮಡಿಕೇರಿ ಹಾಗೂ ವೀರಾಜಪೇಟೆ ಕೇಂದ್ರ ಸ್ಥಳಗಳೊಳಗೆ ತಂದು ಆ ಬಳಿಕ ಅಂದೇ ಸುರಕ್ಷಿತ ವ್ಯವಸ್ಥೆಯಲ್ಲಿ ಮೈಸೂರಿನ ಭದ್ರತಾ ಕೊಠಡಿಗೆ ಕೊಂಡೊಯ್ದು ಭದ್ರತೆಯ ಕೊಠಡಿಯಲ್ಲಿ ಇರಿಸಲಾಗುತ್ತದೆ.