ಸುಂಟಿಕೊಪ್ಪ, ಏ. 15: ಸಂತೆ ದಿನವಾದ ಭಾನುವಾರ ಬಿಜೆಪಿ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಪಟ್ಟಣ ನಿವಾಸಿಗಳ ಮನೆ, ಅಂಗಡಿ, ಹೋಟೆಲ್‍ಗಳಿಗೆ ತೆರಳಿ ವiತಯಾಚಿಸಿದರು. ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ್ ತಾಲೂಕು ಪಂಚಾಯಿತಿ ಸದಸ್ಯೆ ಓಡಿಯಪ್ಪನ ವಿವiಲಾವತಿ ನಗರ ಬಿಜೆಪಿ ಅಧ್ಯಕ್ಷ ಪಿ.ಆರ್.ಸುನಿಲ್‍ಕುಮಾರ್, ಸುಂಟಿಕೊಪ್ಪ ಗ್ರಾ.ಪಂ. ಸದಸ್ಯರುಗಳಾದ ಸಿ.ಚಂದ್ರ, ಜ್ಯೋತಿ ಭಾಸ್ಕರ್, ಗಿರಿಜಾ ಉದಯಕುಮಾರ್, ನಗರ ಬಿಜೆಪಿ ಕಾರ್ಯದರ್ಶಿ ಪ್ರಶಾಂತ್ ಬಿಜೆಪಿ ಹಿಂದುಳಿದ ವರ್ಗಗಳ ಕಾರ್ಯದರ್ಶಿ ನಾಗೇಶ್ ಪೂಜಾರಿ, ಬಿ. ಕೆ. ಮೋಹನ್ ಹಾಗೂ ಇತರರು ಮತಯಾಚನೆಯಲ್ಲಿ ಪಾಲ್ಗೊಂಡಿದ್ದರು.