ಮಡಿಕೇರಿ, ಏ. 15: ತೀವ್ರ ಕೂತೂಹಲ ಮೂಡಿಸಿದ್ದ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಇಂದು ನಡೆದ ಚುನಾವಣೆಯಲ್ಲಿ ಮುಂದಿನ 5 ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಕೊಡಂದೇರ ಬಾಂಡ್ ಗಣಪತಿ ಹಾಗೂ ಉಪಾಧ್ಯಕ್ಷರಾಗಿ ದ್ವಿತೀಯ ಅವಧಿಗೆ ಕೇಟೋಳಿರ ಹರೀಶ್ ಪೂವಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಇಂದು ಬ್ಯಾಂಕ್ ಸಭಾಂಗಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಇತ್ತೀಚೆಗೆÉ ನಡೆದ ಚುನಾವಣೆಯಲ್ಲಿ ಆಯ್ಕೆ ಗೊಂಡಿದ್ದ 13 ಮಂದಿ ನಿರ್ದೇಶಕರುಗಳು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಪ್ರಾರಂಭದಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಿರ್ಗಮಿತ ಅಧ್ಯಕ್ಷ ಬಿ.ಡಿ. ಮಂಜುನಾಥ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕನ್ನಂಡ ಸಂಪತ್ ನಾಮಪತ್ರ ಸಲ್ಲಿಸಿದ್ದರು. ನಿರೀಕ್ಷೆಯಂತೆ ಬಾಂಡ್ ಗಣಪತಿ ಅಧ್ಯಕ್ಷ ಸ್ಥಾನಕ್ಕೂ ಮತ್ತು ಹರೀಶ್ ಪೂವಯ್ಯ ಉಪಾಧ್ಯಕ್ಷ ಸ್ಥಾನಕ್ಕೂ ಉಮೇದುವಾರಿಕೆ ಸಲ್ಲಿಸಿದ್ದರು. ಅಂತಿಮವಾಗಿ ಮಾತುಕತೆಯ ಮೂಲಕ ಬಿಜೆಪಿ ಬೆಂಬಲಿತ ಎಲ್ಲಾ ನಿರ್ದೇಶಕರು ಒಮ್ಮತದ ತೀರ್ಮಾನದೊಂದಿಗೆ ಪಕ್ಷದ ಮುಖಂಡರ ಜಿಲ್ಲಾ ಕೇಂದ್ರ ಬ್ಯಾಂಕ್‍ಗೆ ಬಾಂಡ್ ಗಣಪತಿ-ಹರೀಶ್ ಪೂವಯ್ಯ ಆಯ್ಕೆನಿರ್ವಹಿಸುವದಾಗಿ ಭರವಸೆಯ ನುಡಿಯಾಡಿದರು.ಬ್ಯಾಂಕಿನಲ್ಲಿ ರೈತರಿಗೆ ಸಕಾಲ ದಲ್ಲಿ ಆರ್ಥಿಕ ನೆರವು ನೀಡಲಾಗು ವದು, ಈಗಾಗಲೇ ಹಿಂದಿನ ಆಡಳಿತ ಮಂಡಳಿಯ ಕಾರ್ಯವೈಖರಿಯ ಬಗ್ಗೆ ಎಲ್ಲರಿಗೂ ಮೆಚ್ಚುಗೆಯಿದ್ದು, ಅದೇ ಮಾದರಿಯಲ್ಲಿ ಇನ್ನು ಮುಂದಕ್ಕೂ ಉತ್ತಮ ಕೆಲಸಗಳನ್ನು ನಿರ್ವಹಿಸಲಾ ಗುವದು ಎಂದು ಮಾರ್ನುಡಿದರು.

ಬ್ಯಾಂಕಿಗೆ ವಿವಿಧ ಸಹಕಾರ ಸಂಘಗಳ ಮುಖಾಂತರ ರೈತರು ಸಾಲ ಪಡೆದು ಸಕಾಲದಲ್ಲಿ ಮರುಪಾವತಿ ಮಾಡುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಬ್ಯಾಂಕಿನಿಂದ ಸುಲಭವಾಗಿ ಸಾಲ ಪಡೆಯಲು ಅವಕಾಶ ಕಲ್ಪಿಸಲಾಗು ವದು ಎಂದು ಭರವಸೆ ನೀಡಿದರು.

ದ್ವಿತೀಯ ಅವಧಿಗೆ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಕೇಟೋಳಿರ ಹರೀಶ್ ಪೂವಯ್ಯ ಮಾತನಾಡಿ, ಎರಡನೇ ಭಾರಿಗೆ ಆಯ್ಕೆಯಾಗಿರುವದು ಸಂತೋಷ ತಂದಿದೆ, ಮುಂದಿನ ದಿನಗಳಲ್ಲಿ ಉತ್ತಮ ಕಾರ್ಯ ಯೋಜನೆಗಳನ್ನು ತಯಾರಿಸಲು, ಅಧ್ಯಕ್ಷರ ಜತೆಗೆ ನೆರವಾಗುತ್ತೇನೆ ಎಂದು ತಿಳಿಸಿದರು.

ನಿರ್ಗಮಿತ ಅಧ್ಯಕ್ಷ ಬಿ.ಡಿ. ಮಂಜುನಾಥ್ ಮಾತನಾಡಿ, ಕಳೆದ 5 ವರ್ಷಗಳಲ್ಲಿ ಬ್ಯಾಂಕ್ ಆಡಳಿತದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಸಾಧಿಸಿರುವ ತೃಪ್ತಿಯಿದೆ. ಅದೇ ರೀತಿ ಮುಂದಿನ ದಿನಗಳಲ್ಲಿ ಬ್ಯಾಂಕ್‍ನ ಸರ್ವತೋಮುಖ ಬೆಳವಣಿಗೆ ಯೊಂದಿಗೆ ನೂತನ ಆಡಳಿತ ಮಂಡಳಿಯೂ ಒಳ್ಳೆಯ ಕೆಲಸ ಮಾಡುವಲ್ಲಿ ಸಹಕಾರ ನೀಡುವದಾಗಿ ಪ್ರಕಟಿಸಿದರು.

ಈಗಾಗಲೇ ಎಟಿಎಂ, ಮೊಬೈಲ್ ಬ್ಯಾಂಕಿಂಗ್, ಶೆಡ್ಯೂಲ್ ಬ್ಯಾಂಕ್ ನಿರ್ಮಾಣ ಹೀಗೆ ಹಲವು ಕಾರ್ಯಯೋಜನೆಗೆ ಮುಂದಾಗಿದ್ದು, ಇಂತಹ ಕೆಲಸಗಳನ್ನು ನೂತನ ಅಧ್ಯಕ್ಷರ ನೇತೃತ್ವದಲ್ಲಿ ಮುಂದುವರೆಸ ಬೇಕಿದೆ ಎಂದರು.