ಸುಂಟಿಕೊಪ್ಪ, ಏ. 15: ದೇಶದ ಸುಭದ್ರತೆಗೆ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರಬೇಕು ಎಂದು ಶಾಸಕ ಎಂ. ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಪಟ್ಟರು.
ಇಲ್ಲಿನ ಕನ್ನಡವೃತ್ತದ ಬಳಿ ಬಿಜೆಪಿಯಿಂದ ಆಯೋಜಿಸಲಾಗಿದ್ದ ಸಾರ್ವಜನಿಕ ಚುನಾವಣಾ ಪ್ರಚಾರ ಭಾಷಣದಲ್ಲಿ ಮಾತನಾಡಿದ ಅವರು ಬಾಹ್ಯಾಕಾಶದಲ್ಲಿ ಕ್ಷಿಪಣಿ ಉಡಾವಣೆ ಯಿಂದ ದೇಶದ ಸೇನೆ ಬಲವೃದ್ಧಿ ಗೊಂಡಿದೆ, ಬಾಲಕೋಟ್‍ನಲ್ಲಿ ಏರ್‍ಸ್ಟ್ರೈಕ್‍ನಿಂದ ಉಗ್ರರನ್ನು ಸದೆಬಡಿದ ಮೋದಿ ಸರಕಾರ ಪ್ರಪಂಚದ ಗಮನಸಳೆದಿದೆ, ಆಯುಷ್ಮಾನ್ ಭಾರತ್ ಉಜ್ವಲ ಯೋಜನೆ ರೈತ ಕಿಸಾನ್ ಸಮಾನ್ ಜನಧನ್ ಕಾರ್ಮಿಕರಿಗೆ ವಿಮಾಸೌಲಭ್ಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮೋದಿ ಸರಕಾರದ ಮೈಲಿಗಲ್ಲಾಗಿವೆ ಎಂದು ಹೇಳಿದರು.
ಸಿದ್ದರಾಮಯ್ಯನವರು ಮುಖ್ಯ ಮಂತ್ರಿಯಾಗಿದ್ದಾಗ ರೈತರ ಸಾಲಮನ್ನಾ ಘೋಷಣೆ ಮಾಡಿದ್ದರೂ ಇನ್ನೂ ಬಾಕಿ ಉಳಿಸಿಕೊಂಡಿದೆ, ಕುಮಾರಸ್ವಾಮಿ ಸರಕಾರ ರೈತರಿಗೆ ಬಿಡಿಕಾಸು ಸಾಲ ಮನ್ನಾ ಮಾಡಲಿಲ್ಲ ಕೊಡಗಿನಲ್ಲಿ ಜಲ ಪ್ರಳಯದಿಂದ ಮನೆ ಮಠ ತೋಟ ಕಳ ಕೊಂಡವರಿಗೆ ಇನ್ನೂ ಪರಿಹಾರ ವಸತಿ ನೀಡದೆ ವಿಳಂಬ ಮಾಡುತ್ತಿ ರುವ ರಾಜ್ಯ ಮೈತ್ರಿ ಸರಕಾರ ಜನರ ಜೀವನದ ಜತೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ವಕ್ತಾರ ಎಂ. ಬಿ. ಅಭಿಮನ್ಯುಕುಮಾರ್ ಅವರು ಮಾತನಾಡಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಪಕ್ಷದ ಆಭ್ಯರ್ಥಿಗೆ ಈಗ ಬಿಜೆಪಿ ಪಕ್ಷ ಕೋಮುವಾದ ಪಕ್ಷವಾಗಿದೆ. ಅವರು ಅರಣ್ಯ ಸಚಿವರಾಗಿದ್ದಾಗ ಗಾರ್ಡಿಲ್ ವರದಿ ಜಾರಿಗೆ ಪ್ರಯತ್ನಿಸಿದ್ದು, ಕಸ್ತೂರಿ ರಂಗನ್ ವರದಿ ಬಗ್ಗೆ ಮೆದು ಧೋರಣೆ ತಾಳಿದ್ದರು. ಕೊಡಗಿನ ಜನರ ಮೇಲೆ ದೌರ್ಜನ್ಯ ನಡೆಸಿ ಮತಾಂತರಿಸಿ ಹತ್ಯೆ ಮಾಡಿದ ಟಿಪ್ಪುಸುಲ್ತಾನ್ ಬಗ್ಗೆ ಅವರು ತಮ್ಮ ನಿಲುವು ಸೃಷ್ಟಿಪಡಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ. ಬಿ. ಭಾರತೀಶ, 60 ವರ್ಷ ಈ ದೇಶದ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಈಗಲೂ ಗರೀಬಿ ಹಠಾವೊ ಎಂದು ಹೇಳಿಕೊಂಡು ಬಡವರನ್ನು ಮೊಸ ಗೊಳಿಸುತ್ತಿದೆ. ಕಾಂಗ್ರೆಸ್‍ನ ಪೊಳ್ಳು ಭರವಸೆಗಳು ಜನತೆಗೆ ಅರ್ಥವಾಗಿದ್ದು ಪ್ರಾದೇಶಿಕ ಪಕ್ಷಗಳು ಸೇರಿ 30 ಪಕ್ಷ ಕಾಂಗ್ರೆಸ್‍ನೊಂದಿಗೆ ಸೇರಿಕೊಂಡಿವೆ. ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸುತ್ತಿದ್ದು ಮತ್ತೆ ಮೋದಿ ಪ್ರಧಾನಿಯಾಗಲಿದ್ದಾರೆ ಎಂದು ಭರವಸೆ ವ್ಯಕ್ತ ಪಡಿಸಿದರು.
ಮಾಜಿ ಎಂಎಲ್‍ಸಿ ಎಸ್. ಜಿ. ಮೇದಪ್ಪ ಮೈಸೂರು ಕೊಡಗು ಲೋಕಸಭಾ ಕ್ಷೇತ್ರ ಸೇರಿದಂತೆ ಇತರೆಡೆ ಬಿಜೆಪಿ. ಅತ್ಯಂತ ಬಹುಮತದಿಂದ ಆಡಳಿತಕ್ಕೆ ಬರಲಿದ್ದು, ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ. ಪ್ರತಾಪ್‍ಸಿಂಹ ಮಂತ್ರಿಯಾಗುತ್ತಾರೆಂದು ಭವಿಷ್ಯ ನುಡಿದರು.
ವೇದಿಕೆಯಲ್ಲಿ ತಾ.ಪಂ. ಸದಸ್ಯರುಗಳಾದ ಓಡಿಯಪ್ಪನ ವಿಮಲಾವತಿ, ಹೆಚ್. ಡಿ. ಮಣಿ, ನಗರ ಬಿಜೆಪಿ ಅಧ್ಯಕ್ಷ ಪಿ.ಆರ್. ಸುನಿಲ್‍ಕುಮಾರ್, ಗ್ರಾ.ಪಂ. ಸದಸ್ಯರು ಗಳಾದ ಗಿರಿಜಾ ಉದಯಕುಮಾರ್, ಜ್ಯೋತಿ ಭಾಸ್ಕರ್, ಬಿ.ಎಂ.ಸುರೇಶ, ಸಿ.ಚಂದ್ರ, ಕೆದಕಲ್‍ನ ಮಾಜಿ ಗ್ರಾ.ಪಂ. ಅಧ್ಯಕ್ಷ ಸೋಮಯ್ಯ, ಸುಂಟಿಕೊಪ್ಪ ಕೃಷಿಪತ್ತಿನ ಬ್ಯಾಮಕ್ ಅಧ್ಯಕ್ಷ ಎನ್.ಸಿ.ಪೊನ್ನಪ್ಪ (ಕ್ಲೈವಾ), ಬಿ.ಕೆ.ಮೋಹನ್, ನಾಗೇಶ್ ಪೂಜಾರಿ, ವಾಸು, ಪ್ರಶಾಂತ್ (ಕೋಕಾ) ಬಿಜೆಪಿ ಕಾರ್ಯಕರ್ತರು ಇದ್ದರು.