ಮಡಿಕೇರಿ, ಏ. 15: ನ್ಯಾಯಬೆಲೆ ಅಂಗಡಿಗಳಿಗೆ ಪ್ರತಿ ಮಂಗಳವಾರ ವಾರದ ರಜೆ ಇರುತ್ತದೆ. ಆದರೆ ಇದೇ ತಾ. 16 ರಂದು (ಇಂದು) ವಾರದ ರಜೆ ಇರುವದಿಲ್ಲ. ತಾ. 16 ರಂದು ಮಡಿಕೇರಿ ತಾಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಗಳನ್ನು ತೆರೆಯುವಂತೆ ಮಾಲೀಕರು ಹಾಗೂ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ತಹಶೀಲ್ದಾರರು ಸೂಚಿಸಿದ್ದಾರೆ.