ಮಡಿಕೇರಿ, ಏ. 15: ವರ್ಷದ ಹಿಂದೆ ಪತಿಯನ್ನು ತಾನು ಸಂಪರ್ಕ ವಿರಿಸಿಕೊಂಡಿದ್ದ ಕೆಲಸದಾತನೊಡ ಗೂಡಿ ಮತ್ತು ಸಾಲಗಾರನ ಮೂಲಕ ಸುಪಾರಿ ನೀಡಿ ಪೂರ್ವನಿಯೋಜಿತ ಸಂಚಿನೊಂದಿಗೆ ಕೊಲೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆಯೊಂದಿಗೆ ದಂಡ ವಿಧಿಸಿ ತೀರ್ಪು ನೀಡಿದೆ.ಕುಶಾಲನಗರ ಬಳಿಯ ಕೊಪ್ಪದಲ್ಲಿ ಪೀಠೋಪಕರಣ ಮಳಿಗೆ ಹೊಂದಿದ್ದ ಮಹೇಶ್ ಎಂಬವರನ್ನು ಅಲ್ಲಿನ ಕೆಲಸಗಾರ ರಘು ಹಾಗೂ ಮಹೇಶ್ ಪತ್ನಿ ಅಶ್ವಿತಾ ಮತ್ತು ಮಹೇಶ್‍ಗೆ ಸಾಲಗಾರನಾಗಿದ್ದ ಕಿರಣ್ ಈ ಮೂವರು ಸೇರಿ ನಿಗೂಢವಾಗಿ ಕೊಲೆಗೈದು ದುಷ್ಕøತ್ಯವನ್ನು ಮುಚ್ಚಿ ಹಾಕಲು ಯತ್ನಿಸಿದ್ದ ಪ್ರಕರಣವನ್ನು ಪೊಲೀಸರು ತನಿಖೆಯ ಮೂಲಕ ಭೇದಿಸಿ ನ್ಯಾಯಾಲಯಕ್ಕೆ ದೋಷಾ ರೋಪಣಾ ಪಟ್ಟಿ ಸಲ್ಲಿಸಿದ್ದರು. ಆ ಮೇರೆಗೆ ವಿಚಾರಣೆ ನಡೆಸಿದ ನ್ಯಾಯಾಧೀಶ ಡಿ. ಪವನೇಶ್ ಅವರು ಇಂದು ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ತಾ. 18.2.2018 ರಂದು ಮಹೇಶನ ಪತ್ನಿ ಅಶ್ವಿತಾ, ರಘು ಹಾಗೂ ಕಿರಣ್ ಮೊಬೈಲ್‍ನಲ್ಲಿ ಸಂಭಾಷಣೆ ನಡೆಸಿ ಕೊಲೆ ಸಂಚು ರೂಪಿಸುತ್ತಾರೆ. ತಾ. 20.2.2018 ರಂದು ರಘು ಮತ್ತು ಕಿರಣ್ ಕುಶಾಲನಗರದ ಮಳಿಗೆಯೊಂದ ರಿಂದ

(ಮೊದಲ ಪುಟದಿಂದ) ನೈಲಾನ್ ಬೆಲ್ಟ್ ಅನ್ನು ಖರೀದಿಸಿಕೊಂಡು ತಾ. 21.2.2018 ರಂದು ಬೆಳಗ್ಗಿನ ಜಾವದಲ್ಲಿ ಅಲ್ಲಿನ ನೇತಾಜಿ ಬಡಾವಣೆಯಲ್ಲಿರುವ ಮಹೇಶ್ ಅವರ ವಾಸದ ಮನೆಗೆ ಬರುತ್ತಾರೆ. ಕೋಣೆಯಲ್ಲಿ ಮಲಗಿ ನಿದ್ರಿಸುತ್ತಿದ್ದ ಸಂದರ್ಭ ಅವರ ಕುತ್ತಿಗೆಗೆ ಈ ಬೆಲ್ಟ್‍ನಿಂದ ಬಿಗಿದು ಮೂವರು ಸೇರಿ ಕೊಲೆ ಮಾಡುತ್ತಾರೆ. ಅಲ್ಲದೆ ಶವವನ್ನು ಮಂಚದ ಅಡಿಯಲ್ಲಿ ಅಡಗಿಸಿ ಇಡುತ್ತಾರೆ. ತಾ. 22.2.2018 ರಂದು ಮಧ್ಯರಾತ್ರಿ 1.30ರ ವೇಳೆಗೆ ಮಹೇಶನಿಗೆ ಸೇರಿದ ಕಾರಿನಲ್ಲಿ (ಕೆಎ 41 ಝಡ್ 4517) ಮೃತ ದೇಹವನ್ನು ತೆಗೆದು ಕೊಂಡು ಮನೆಯಿಂದ ತೆರಳಿದ್ದಾರೆ.

ಆರೋಪಿಗಳಾದ ರಘು ಮತ್ತು ಕಿರಣ್ ಕಾರು ಸಹಿತ ಹೋಗಿ ಉಪ್ಪಿನಂಗಡಿ ವ್ಯಾಪ್ತಿಯ ಶಿರಾಡಿ ಘಾಟ್ ಹೆದ್ದಾರಿಯ ಪಕ್ಕದಲ್ಲಿ ಕೆಂಪು ಹೊಳೆ ಎಂಬಲ್ಲಿ ಪ್ರಪಾತಕ್ಕೆ ಶವವನ್ನು ಎಸೆದು ಬರುತ್ತಾರೆ. ಆನಂತರದಲ್ಲಿ ಅದೇ ದಿನ ಸಂಜೆ ಮೃತನ ಪತ್ನಿ ತನ್ನ ಪತಿಯು ಕಾಣೆಯಾಗಿರುವದಾಗಿ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಗೆ ಲಿಖಿತ ದೂರು ಸಲ್ಲಿಸುತ್ತಾಳೆ. ಆ ಮೂಲಕ ಪತಿಯ ಕೊಲೆ ಪ್ರಕರಣ ವನ್ನು ಮುಚ್ಚಿ ಹಾಕುವದರೊಂದಿಗೆ ಸತ್ಯಾಂಶವನ್ನು ಮರೆಮಾಚಲು ಯತ್ನಿಸುತ್ತಾಳೆ.

ಇತ್ತ ಮಹೇಶ್ ಹಠಾತ್ ಕಾಣೆಯಾದ ಬಗ್ಗೆ ಸಂಶÀಯಗೊಳ್ಳುವ ಮೃತನ ಸಂಬಂಧಿಕರು ಅಶ್ವಿತಾಳ ನಡೆಯ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರ ಮೊರೆ ಹೋಗುತ್ತಾರೆ. ಅಲ್ಲದೆ ಆಕೆಯ ನಡೆ ಬಗ್ಗೆ ಮತ್ತಷ್ಟು ಅನುಮಾನಗೊಂಡ ಪೊಲೀಸರು ಈ ಸಂಬಂಧ ವಿಚಾರಣೆ ಆರಂಭಿಸು ತ್ತಾರೆ. ಆ ವೇಳೆಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಶಿರಾಡಿಘಾಟ್‍ನಲ್ಲಿ ಅಪರಿಚಿತ ಶವ ಪತ್ತೆಯಾದ ಸುಳಿವನ್ನು ಅಲ್ಲಿನ ಪೊಲೀಸರು ನೀಡುತ್ತಾರೆ.

ಈ ಮೇರೆಗೆ ಅಂದಿನ ಕುಶಾಲನಗರ ಡಿವೈಎಸ್‍ಪಿ ಮುರಳೀಧರ್ ನೇತೃತ್ವ ದಲ್ಲಿ ಬಿರುಸಿನ ತನಿಖೆ ಕೈಗೊಳ್ಳುತ್ತಾರೆ. ಈ ಸಂದರ್ಭ ಮೃತ ದೇಹವು ಮಹೇಶ್‍ನದ್ದು ಎಂದು ಖಾತರಿಯಾಗುತ್ತದೆ.

ಪುತ್ತೂರು ವ್ಯಾಪ್ತಿಯ ಡಿವೈಎಸ್‍ಪಿ ಶ್ರೀನಿವಾಸ್ ಮೂರ್ತಿ ಹಾಗೂ ಕೊಡಗು ಪೊಲೀಸ್ ತಂಡ ನಡೆಸಿದ ತನಿಖೆಯೊಂದಿಗೆ ಪೂರ್ವನಿಯೋಜಿತ ಕೊಲೆ ಪ್ರಕರಣ ಬಹಿರಂಗಗೊಳ್ಳಲಿದೆ. ಆ ಮೇರೆಗೆ ಆರೋಪಿಗಳ ವಿರುದ್ಧ ಪೊಲೀಸ್ ಕಾಯ್ದೆ 120(ಡಿ), 302, 201 ಆರ್/ವಿ 34 ಐಪಿಸಿ ಮತ್ತು 3(2) (ವಿ) ಎಸ್‍ಸಿ, ಎಸ್‍ಟಿ ದೌರ್ಜನ್ಯ ತಡೆ ಕಾಯ್ದೆ ಪ್ರಕಾರ ದೋಷರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ. ಸದರಿ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶ ಡಿ. ಪವನೇಶ್ ಆಲಿಸಿ ಶಿಕ್ಷೆ ಪ್ರಕಟಿಸಿದ್ದು, ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆಯೊಂದಿಗೆ ತಲಾ ರೂ. 25 ಸಾವಿರದಂತೆ ದಂಡ ವಿಧಿಸಿದ್ದಾರೆ.

ಈ ಸಂಬಂಧ ಸರಕಾರಿ ಅಭಿಯೋಜಕರಾದ ಕೃಷ್ಣವೇಣಿ ವಾದ ಮಂಡಿಸಿದ್ದರು.