ಮಡಿಕೇರಿ, ಏ. 15: ತಿರಿಬೊಳ್‍ಚ ಕೊಡವ ಸಂಘ ಮತ್ತು ಪೊನ್ನಂಪೇಟೆ ಕೊಡವ ಸಮಾಜದ ಜಂಟಿ ಆಶ್ರಯದಲ್ಲಿ ತಾ. 16 ರಂದು (ಇಂದು) ವಿಚಾರ ಸಂಕಿರಣ ನಡೆಯಲಿದೆ. ಕೊಡವ ವಿವಾಹದ ಗಂಗಾ ಪೂಜೆಯ ಬಗ್ಗೆ ಜನಜಾಗೃತಿ ಮೂಡಿಸಿ, ಮೂಲ ಪದ್ಧತಿಗೆ ಆದ್ಯತೆ ನೀಡುವ ಸಂಬಂಧ ಈ ವಿಚಾರ ಸಂಕಿರಣ ನಡೆಯಲಿದೆ. ಪೊನ್ನಂಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ಬೆ. 10 ರಿಂದ 1.30ರವರೆಗೆ ಕಾರ್ಯಕ್ರಮ ನಡೆಯಲಿದೆ.