ಕೂಡಿಗೆ, ಏ. 15: ಇಲ್ಲಿಗೆ ಸಮೀಪದ ಬಾಣಾವರ ವ್ಯಾಪ್ತಿಯ ಚಿಕ್ಕ ಅಳುವಾರದಲ್ಲಿ ನಡೆದಿದ್ದ ಬೀಟೆ ಮರ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಇಂದು ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಎ.ಅರ್. ರಮೇಶ ಎಂಬಾತನನ್ನು ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಲಾಗಿದೆ. ಈ ಸಂದರ್ಭದಲ್ಲಿ ಸೋಮವಾರಪೇಟೆ ವಲಯ ಅರಣ್ಯ ಅಧಿಕಾರಿ ಲಕ್ಷ್ಮಿಕಾಂತ್, ಬಾಣಾವರ ಸಹಾಯಕ ಅಧಿಕಾರಿ ಮಹದೇವ ನಾಯಕ, ಸಿಬ್ಬಂದಿ ವರ್ಗದವರು ಇದ್ದರು.