ಶ್ರೀಮಂಗಲ, ಏ. 15: ಬಿ.ಜೆ.ಪಿ.ಯ ಹಾಲಿ ಸಂಸದ ಪ್ರತಾಪ್ ಸಿಂಹ ಅವರು ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರ ಸಾಲ ಮನ್ನಾ ಮಾಡುವ ಬಗ್ಗೆ ತಮ್ಮ ಪ್ರಣಾಳಿಕೆಯಲ್ಲಿ ಭರವಸೆ ನೀಡಿ ಕಳೆದ 5 ವರ್ಷದಿಂದ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದೆ ವಂಚನೆ ಮಾಡಿದ್ದಾರೆ. ಕÀರಿಮೆಣಸು ಆಮದಿನಿಂದ ದರ ಕುಸಿತವುಂಟಾಗಿ ಸಂಕಷ್ಟದಲ್ಲಿರುವ ಬೆಳೆಗಾರರ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ದಂಧೆ ಮಾಡುತ್ತಿದ್ದವರನ್ನು ಕೊಡಗಿನಿಂದ ಹೊರಹಾಕಿದ ನಂತರ ಅವರಿಗೆ ಮೈಸೂರಿನಲ್ಲಿ ಪ್ರತಾಪ್‍ಸಿಂಹ ಆಶ್ರ್ರಯ ಕಲ್ಪಿಸಿ ಅಕ್ರಮ ಕರಿಮೆಣಸು ಆಮದಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಆರೋಪಿಸಿದರು.
ಶ್ರೀಮಂಗಲದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಪರ ಉಭಯ ಪಕ್ಷದಿಂದ ಹಮ್ಮಿಕೊಂಡಿದ್ದ ಪ್ರಚಾರ ಮೆರವಣಿಗೆ ಹಾಗೂ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಅವರು ಗೆದ್ದುಬಂದರೆ ಅಕ್ರಮ ಕರಿಮೆಣಸು ಹಗರಣದ ವಿರುದ್ಧ ರಾಷ್ಟ್ರೀಯ ತನಿಖೆ ನಡೆಸುವದು ಮತ್ತು ಕರಿಮೆಣಸು ದಂಧೆಯನ್ನು ನಿಲ್ಲಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಾಮಾಣಿಕ ಪ್ರಯತ್ನ ಮಾಡಲಾಗುವದು ಎಂದು ಹೇಳಿದರು.
ಜೆ.ಡಿ.ಎಸ್ ಜಿಲ್ಲಾ ವಕ್ತಾರ ಎಂ.ಟಿ. ಕಾರ್ಯಪ್ಪ ಅವರು ಮಾತನಾಡಿ ಜಿಲ್ಲೆಯ ಕಾಫಿ ಹಾಗೂ ಕರಿಮೆಣಸು ಬೆಳೆಗಾರರಿಗೆ ಮೋದಿ ನೇತೃತ್ವದ ಬಿ.ಜೆ.ಪಿ. ಸರಕಾರ ಭಾರೀ ಅನ್ಯಾಯ ಮಾಡಿದೆ. ಬಿ.ಜೆ.ಪಿ. ಅಧಿಕಾರದಲ್ಲಿರುವ ಗೋಣಿಕೊಪ್ಪ ಎ.ಪಿ.ಎಂ.ಸಿ.ಯಲ್ಲಿ ವಿಯೆಟ್ನಾಂ ಕಳಪೆ ಕರಿಮೆಣಸು ಹಗರಣದಿಂದ ಬೆಳೆಗಾರರಿಗೆ ಅನ್ಯಾಯವಾಗಿದೆ. ತಳಮಟ್ಟದಲ್ಲಿಯೇ ಇಂತಹ ಹಗರಣ ಮಾಡುವ ಬಿ.ಜೆ.ಪಿ. ಯಿಂದ ದೇಶಕ್ಕೆ ಉತ್ತಮ ಆಡಳಿತ ಹೇಗೆ ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು.
ಜಿ.ಪಂ. ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶಿವು ಮಾದಪ್ಪ ಅವರು ಮಾತನಾಡಿ ಬಿ.ಜೆ.ಪಿ. ಯ ತತ್ವ ಸಿದ್ಧಾಂತವನ್ನು ಪ್ರಶ್ನಿಸಿದರೆ ಅವರನ್ನು ದೇಶ ದ್ರೋಹಿಗಳಾಗಿ ಬಿಂಬಿಸಲಾಗುತ್ತಿದೆ. ಕಾಂಗ್ರೆಸ್ ಪಕ್ಷ ಸಮಾಜದಲ್ಲಿ ಎಲ್ಲಾ ವರ್ಗದವರನ್ನು ಸಮಾನತೆಯಿಂದ ಕಾಣುತ್ತದೆ ಎಂದರು. ಜೆ.ಡಿ.ಎಸ್.ನ ಪ್ರಮುಖರಾದ ಉಳುವಂಗಡ ದತ್ತ, ಪರಮಲೆ ಗಣೇಶ್, ಕಾಂಗ್ರೆಸ್ ಮುಖಂಡರಾದ ಕೆ.ಎಸ್. ಸುಬ್ರಮಣಿ, ಜಿ.ಪಂ. ಸದಸ್ಯ ಬಾನಂಡ ಪೃಥ್ಯು, ತಾ.ಪಂ. ಸದಸ್ಯ ಪÉಲ್ವಿನ್ ಪೂಣಚ್ಚ, ಪ್ರಮುಖರಾದ ಬೋಸ್ ಮಾದಪ್ಪ, ವಿಶು ರಂಜಿ, ರಾಮಕೃಷ್ಣ, ಅಪ್ಪಚಂಗಡ ಮೋಟಯ್ಯ, ಜಮ್ಮಡ ಸೋಮಣ್ಣ, ಕ.ಎಂ. ಬಾಲಕೃಷ್ಣ, ಮಾಚಿಮಾಡ ಮನು, ಮುಕ್ಕಾಟೀರ ಸಂದೀಪ್, ನಾಗರಾಜು,ಕಾಳಿಮಾಡ ಪ್ರಶಾಂತ್, ಲೀಲಾಪ್ರಭು, ತೀತೀರ ರುಕ್ಮಿಣಿ, ಆಶಾ, ರೋಸ್ಲಿ ಮತ್ತಿತರರು ಹಾಜರಿದ್ದರು.