ಮಡಿಕೇರಿ, ಏ. 15: ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಡಿಕೇರಿ ತಾಲೂಕು ಜಾನಪದ ಪರಿಷತ್, ಮಿಸ್ಟಿ ಹಿಲ್ಸ್, ಮತದಾರರ ಶಿಕ್ಷಣ ಸಹಭಾಗಿತ್ವ ಸಮಿತಿ ಸಂಯುಕ್ತಾಶ್ರಯದಲ್ಲಿ ಆಯೋಜಿತ ಮತದಾರರ ಜಾಗೃತಿ ಕುರಿತು ಪ್ರಚಾರ ಕಲಾ ಶಿಬಿರ ಜನಮೆಚ್ಚುಗೆಗೆ ಪಾತ್ರವಾಯಿತು.
ಮಡಿಕೇರಿಯ ರಾಜಾಸೀಟ್‍ನಲ್ಲಿ ವಿಶ್ವ ಚಿತ್ರಕಲಾ ದಿನಾಚರಣೆ ಸಂದರ್ಭ ಆಯೋಜಿತ ಮತದಾರರ ಜಾಗೃತಿ ಕಾರ್ಯಕ್ರಮವನ್ನು ಚಿತ್ರಕಲಾವಿದ ಬಿ.ಆರ್. ಸತೀಶ್ ರಚಿಸಿದ ಮತದಾನದ ಮಹತ್ವ ಬಿಂಬಿಸುವ ಕೈಬೆರಳಿನ ಬೃಹತ್ ಚಿತ್ರಕ್ಕೆ ಬಣ್ಣ ಸಿಂಪಡಣೆ ಮೂಲಕ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ಮತದಾರರ ಶಿಕ್ಷಣ, ಸಹಭಾಗಿತ್ವ ಸಮಿತಿ ಅಧ್ಯಕ್ಷೆ ಲಕ್ಷ್ಮೀಪ್ರಿಯ ಉದ್ಘಾಟಿಸಿದರು.
ಮತದಾರರಲ್ಲಿ ಮತದಾನ ಸಂದರ್ಭ ರಾಜಕೀಯ ಪಕ್ಷಗಳ ಆಮಿಷಕ್ಕೆ ಬಲಿಯಾಗದಿರಿ ಎಂಬ ಸಂದೇಶದ ಬ್ಯಾನರ್ ಅನಾವರಣ ಗೊಳಿಸಿದ ಬಳಿಕ ಮಾತನಾಡಿದ ಕೆ. ಲಕ್ಷ್ಮೀಪ್ರಿಯಾ ಅವರು, ತಾ. 18 ರಂದು ನಡೆಯುವ ಮತದಾನದಂದು 18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡುವಂತಾಗಬೇಕು ಎಂದು ಕೋರಿದರು.
ಜಿಲ್ಲಾ ಜಾನದಪ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಪ್ರತಿಯೊಬ್ಬರ ಮತ ಅತ್ಯಮೂಲ್ಯ ವಾಗಿದ್ದು, ಒಂದೊಂದು ಮತವೂ ರಾಷ್ಟ್ರದ ಚರಿತ್ರೆಯನ್ನೇ ಬದಲಿಸಲಿದೆ. ಆದ್ದರಿಂದ ಅರ್ಹರೆಲ್ಲರೂ ಮಡಿಕೇರಿ, ಏ. 15: ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಡಿಕೇರಿ ತಾಲೂಕು ಜಾನಪದ ಪರಿಷತ್, ಮಿಸ್ಟಿ ಹಿಲ್ಸ್, ಮತದಾರರ ಶಿಕ್ಷಣ ಸಹಭಾಗಿತ್ವ ಸಮಿತಿ ಸಂಯುಕ್ತಾಶ್ರಯದಲ್ಲಿ ಆಯೋಜಿತ ಮತದಾರರ ಜಾಗೃತಿ ಕುರಿತು ಪ್ರಚಾರ ಕಲಾ ಶಿಬಿರ ಜನಮೆಚ್ಚುಗೆಗೆ ಪಾತ್ರವಾಯಿತು.
ಮಡಿಕೇರಿಯ ರಾಜಾಸೀಟ್‍ನಲ್ಲಿ ವಿಶ್ವ ಚಿತ್ರಕಲಾ ದಿನಾಚರಣೆ ಸಂದರ್ಭ ಆಯೋಜಿತ ಮತದಾರರ ಜಾಗೃತಿ ಕಾರ್ಯಕ್ರಮವನ್ನು ಚಿತ್ರಕಲಾವಿದ ಬಿ.ಆರ್. ಸತೀಶ್ ರಚಿಸಿದ ಮತದಾನದ ಮಹತ್ವ ಬಿಂಬಿಸುವ ಕೈಬೆರಳಿನ ಬೃಹತ್ ಚಿತ್ರಕ್ಕೆ ಬಣ್ಣ ಸಿಂಪಡಣೆ ಮೂಲಕ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ಮತದಾರರ ಶಿಕ್ಷಣ, ಸಹಭಾಗಿತ್ವ ಸಮಿತಿ ಅಧ್ಯಕ್ಷೆ ಲಕ್ಷ್ಮೀಪ್ರಿಯ ಉದ್ಘಾಟಿಸಿದರು.
ಮತದಾರರಲ್ಲಿ ಮತದಾನ ಸಂದರ್ಭ ರಾಜಕೀಯ ಪಕ್ಷಗಳ ಆಮಿಷಕ್ಕೆ ಬಲಿಯಾಗದಿರಿ ಎಂಬ ಸಂದೇಶದ ಬ್ಯಾನರ್ ಅನಾವರಣ ಗೊಳಿಸಿದ ಬಳಿಕ ಮಾತನಾಡಿದ ಕೆ. ಲಕ್ಷ್ಮೀಪ್ರಿಯಾ ಅವರು, ತಾ. 18 ರಂದು ನಡೆಯುವ ಮತದಾನದಂದು 18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡುವಂತಾಗಬೇಕು ಎಂದು ಕೋರಿದರು.
ಜಿಲ್ಲಾ ಜಾನದಪ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಪ್ರತಿಯೊಬ್ಬರ ಮತ ಅತ್ಯಮೂಲ್ಯ ವಾಗಿದ್ದು, ಒಂದೊಂದು ಮತವೂ ರಾಷ್ಟ್ರದ ಚರಿತ್ರೆಯನ್ನೇ ಬದಲಿಸಲಿದೆ. ಆದ್ದರಿಂದ ಅರ್ಹರೆಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಕರೆ ನೀಡಿದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ಪ್ರತಿಯೊಬ್ಬ ಮತದಾರರು ಪ್ರಜಾಪ್ರಭುತ್ವದ ಭದ್ರ ಬುನಾದಿಗೆ ಮತದಾನ ಮಾಡಬೇಕು ಎಂದರು. ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಮತಹಕ್ಕು ಚಲಾಯಿಸುವದು ಅರ್ಹರೆಲ್ಲರ ಜವಾಬ್ದಾರಿಯಾಗಿದೆ ಎಂದು ನುಡಿದರು.
ಸ್ವೀಪ್ ಜಿಲ್ಲಾ ರಾಯಭಾರಿ ಭಾಗೀರಥಿ ಹುಲಿತಾಳ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಮತದಾನವಾಗುತ್ತದೆ. ಅದೇ ರೀತಿ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿಯೂ ಹೆಚ್ಚಿನ ಮತದಾನ ಆಗಬೇಕು ಎಂದರು.
ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ, ಮಾತನಾಡಿ, ಕಳೆದ ಮೂರು ವರ್ಷಗಳಿಂದ ತಾಲೂಕು ಜಾನಪದ ಪರಿಷತ್ ವತಿಯಿಂದ ವಿಶ್ವಕಲಾ ದಿನಾಚರಣೆ ಆಚರಿಸಲಾಗುತ್ತಿದ್ದು, ಕಳೆದ ವರ್ಷ ಮತ್ತು ಈ ವರ್ಷ ಚುನಾವಣೆ ಸನಿಹವಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಮತದಾನದ ಬಗ್ಗೆ ಆಯೋಜಿಸಲಾಗಿದೆ. ಈ ವರ್ಷ 148 ಸ್ಪರ್ಧಿಗಳು ಚಿತ್ರಕಲಾ ಸ್ಪರ್ಧೆಗೆ ಪಾಲ್ಗೊಂಡಿರುವದು ಹೆಮ್ಮೆ ತಂದಿದೆ ಎಂದರು.
ವೀರಾಜಪೇಟೆಯ ಗಾಯಕ ಬಿ.ಕೆ. ಮೋಹನ್ , ಕ್ಲಿಫರ್ಡ್ ಡಿಮೆಲ್ಲೋ ಮತ್ತು ಟಾಮಿ ಥೋಮಸ್ ತಂಡದಿಂದ ಹಾಡುಗಾರಿಕೆ ಮನಸೆಳೆಯಿತು. ಸಾರ್ವಜನಿಕರ ಎದುರೇ ಕಲಾವಿದ ಬಿ.ಆರ್. ಸತೀಶ್ ಬಿಳಿಪರದೆಯಲ್ಲಿ ಮತದಾನದ ಮಹತ್ವ ಸಾರುವ ಚಿತ್ರವನ್ನು ವರ್ಣಮಯವಾಗಿ ರಚಿಸಿ ಶ್ಲಾಘನೆಗೆ ಪಾತ್ರರಾದರಲ್ಲದೆ, ಈ ಬಗ್ಗೆ ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಅಂಚೆಚೀಟಿ ಮೂಲಕ ಹನಿಗವನ ಹಾಗೂ ವ್ಯಂಗ್ಯ ಚಿತ್ರಸ್ಪರ್ಧೆ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಚುಟುಕು ಸ್ಪರ್ಧೆ ವಿಜೇತರಾದ ಚೈತ್ರ ಬೆಳ್ಳಾರಿಮಾಡು (ಪ್ರಥಮ), ನಾ.ಲ. ವಿಜ (ದ್ವಿತೀಯ) ಹಾಗೂ ಕೆ.ವಿ. ಪುಟ್ಟಣ ಆಚಾರ್ಯ (ತೃತೀಯ) ಬಹುಮಾನ ಪಡೆದುಕೊಂಡರು.