ವೀರಾಜಪೇಟೆ: ಏ. 15: ಭಾರತೀಯ ಜನತಾ ಪಾರ್ಟಿ ವತಿಯಿಂದ ವೀರಾಜಪೇಟೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಪಕ್ಷದ ಮುಖಂಡರುಗಳು ರೋಡ್‍ಶೋ ನಡೆಸುವ ಮೂಲಕ ಮತಯಾಚನೆ ನಡೆಸಿದರು.

ಇಲ್ಲಿನ ಮಾರಿಯಮ್ಮ ದೇವಾಲಯ ದಿಂದ ಬೆಳಿಗ್ಗೆ 10-30 ಗಂಟೆಗೆ ತೆಲುಗರ ಬೀದಿ ಜೈನರಬೀದಿ, ದೊಡ್ಡಟ್ಟಿಚೌಕಿ, ಮುಖ್ಯ ರಸ್ತೆಗಾಗಿ ಮೆರವಣಿಗೆ ಹೊರಟು ಗಡಿಯಾರ ಕಂಬದ ಮಾರ್ಗವಾಗಿ ಖಾಸಗಿ ಬಸ್ ನಿಲ್ದಾಣ, ಗೋಣಿಕೊಪ್ಪ ರಸ್ತೆಗಾಗಿ ಕಾರು ನಿಲ್ದಾಣದವರೆಗೆ ಚುನಾವಣಾ ಪ್ರಚಾರ ಹಾಗೂ ರೋಡ್‍ಶೋ ನಡೆಸಿದರು. ರೋಡ್ ಶೋ ನಂತರ ಸ್ಥಳೀಯ ಕಾರು ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಸಭೆಯಲ್ಲಿ ಭಾರತಿಯ ಜನತಾ ಪಾರ್ಟಿಯ ರಾಜ್ಯ ಸಮಿತಿ ವಕ್ತಾರ ಮಹೇಶ್ ಅವರು ಮಾತನಾಡಿ ಭಾರತದ ಜನತೆಯನ್ನು ಒಂದೇ ಕುಟುಂಬದವರಂತೆ ನೋಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಐದು ವರ್ಷದಲ್ಲಿ ದೇಶದ ವ್ಯವಸ್ಥೆಯನ್ನು ಸರಿಮಾಡುವ ಮೂಲಕ ವಿಶ್ವವೇ ಭಾರತವನ್ನು ತಿರುಗಿ ನೋಡುವಂತಹ ಕೆಲಸ ಮಾಡುತ್ತಿದ್ದಾರೆ. ಇನ್ನು ಐದು ವರ್ಷಗಳಲ್ಲಿ ಭಾರತದ ಪ್ರತಿಯೊಬ್ಬರಿಗೂ ಮೂಲಭೂತದ ಎಲ್ಲಾ ಸೌಲಭ್ಯಗಳು ದೊರಕು ವಂತಾಗಲು ಈ ಬಾರಿಯ ಚುನಾವಣೆಯಲ್ಲಿ ಮತದಾರರು ಈ ಕ್ಷೇತ್ರದ ಅಭ್ಯರ್ಥಿ ಪ್ರತಾಪ್ ಸಿಂಹ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಬಿಜೆಪಿ ಮುಖಂq ಹಾಗೂÀ ಜಿಲ್ಲಾ ಮಾಜಿ ಅಧ್ಯಕ್ಷ ಸುಜಾಕುಶಾಲಪ್ಪ ಅವರು ಮಾತನಾಡಿ ಕೇಂದ್ರದ ಬಿಜೆಪಿ ಸರಕಾರ ಜನರ ಮನೆ ಬಾಗಿಲಿಗೆ ಸರಕಾರದ ಯೋಜನೆಯ ಎಲ್ಲ ಸೌಲಭ್ಯಗಳು ದೊರಕುವಂತ ಕೆಲಸ ಮಾಡಿದೆ. ಕಳೆದ 50 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಮಾಡದಂvಹÀ ಅಭಿವೃದ್ಧಿ ಕೆಲಸಗಳನ್ನು ನರೇಂದ್ರ ಮೋದಿ ಸರಕಾರ ಐದು ವರ್ಷದಲ್ಲಿ ಮಾಡಿದ್ದಾರೆ. ಗ್ರಾಮೀಣ ಭಾಗದ ಕಡು ಬಡವರನ್ನು ಹುಡುಕಿ ಅಡುಗೆ ಅನಿಲ ಹಾಗೂ ಕಾರ್ಮಿಕರು ಸೇರಿದಂತೆ ಪ್ರತಿಯೊಬ್ಬರಿಗೂ ಅನೇಕ ಸೌಲಭ್ಯಗಳು ದೊರಕುವಂತ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದರು.

ಅಧ್ಯಕ್ಷತೆಯನ್ನು ನೆಲ್ಲೀರ ಚಲನ್ ಕುಮಾರ್ ವಹಿಸಿದ್ದರು. ಪಕ್ಷದ ಮುಖಂಡರಾದ ರೀನಾ ಪ್ರಕಾಶ್, ಅರುಣ್ ಭೀಮಯ್ಯ ಇತರರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಚ್ಚಪಂಡ ಮಹೇಶ್ ಗಣಪತಿ, ಮುಕೊಂಡ ಶಶಿ ಸುಬ್ರಮಣಿ, ಭವ್ಯ, ನಗರ ಅಧ್ಯಕ್ಷ ಅನಿಲ್ ಮಂದಣ್ಣ, ಕಾರ್ಯದರ್ಶಿ ದಿವಾಕರ್, ಪಟ್ಟಣ ಪಂಚಾಯಿತಿಯ ಬಿಜೆಪಿ ಸದಸ್ಯರು, ಮಾಜಿ ಸದಸ್ಯರು, ಹಾಗೂ ಪಕ್ಷದ ಕಾರ್ಯಕರ್ತರುಗಳು ರೋಡ್‍ಶೋ ಮತ್ತು ಸಭೆಯಲ್ಲಿ ಭಾಗವಹಿಸಿದ್ದರು.