ಮಡಿಕೇರಿ, ಏ. 16 : ಕೊಡಗು - ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಈ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಮುಂದಿನ 24 ಗಂಟೆಗಳಲ್ಲಿ ಪ್ರಸಕ್ತ ಸ್ಪರ್ಧೆಯಲ್ಲಿರುವ 22 ಮಂದಿ ಅಭ್ಯರ್ಥಿಗಳ ಭವಿಷ್ಯವನ್ನು 18,95,056 ಮತದಾರರು ನಿರ್ಧರಿಸ ಲಿದ್ದಾರೆ. ಈ ಪೈಕಿ ಕೊಡಗಿನ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 269 ಮತಗಟ್ಟೆಗಳು ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 274 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅಂತೆಯೇ ಜಿಲ್ಲೆಯ 543 ಮತಗಟ್ಟೆಗಳಲ್ಲಿ 218867 ಪುರುಷರು ಮತ್ತು 221838 ಮಹಿಳೆಯರು ಹಾಗೂ 25 ಅನ್ಯ ಮತದಾರರ ಸಹಿತ 4,40,730 ಮಂದಿ ಮತದಾನದ ಹಕ್ಕು ಪಡೆದಿದ್ದಾರೆ. ಒಟ್ಟು ಮತದಾರರಲ್ಲಿ ಜಿಲ್ಲೆಯ ಮಟ್ಟಿಗೆ 2971 ಮಹಿಳಾ ಮತದಾರರು, ಪುರುಷರಿಗಿಂತ ಅಧಿಕವಿದ್ದಾರೆ. ಇಡೀ ಕೊಡಗು - ಮೈಸೂರು ಕ್ಷೇತ್ರದಲ್ಲಿ ಪುರುಷರಿಗಿಂತ ಒಟ್ಟು 5268 ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಜಂಟಿ ಸುದ್ದಿಗೋಷ್ಠಿ : ಲೋಕಸಭಾ ಚುನಾವಣೆ ಸಂಬಂಧ ಕೊಡಗು ಜಿಲ್ಲೆಯಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಇಂದು ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ ಜಾಯ್ ಇತರ ಅಧಿಕಾರಿಗಳೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದರು.

ತಾ. 17ರಂದು (ಇಂದು) ಬೆಳಿಗ್ಗೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ 274 ಮತಗಟ್ಟೆಗಳಿಗೆ, ವೀರಾಜಪೇಟೆ ಸರಕಾರಿ ಜೂನಿಯರ್ ಕಾಲೇಜು ಮಸ್ಟರಿಂಗ್ ಕೇಂದ್ರದಿಂದ ಮತ ಯಂತ್ರಗಳನ್ನು ಕೊಂಡೊಯ್ಯುವದ ರೊಂದಿಗೆ, ಮಡಿಕೇರಿ ವಿಧಾನಸಭಾ ಕ್ಷೇತ್ರದ 269 ಮತಗಟ್ಟೆಗಳಿಗೆ ನಗರದ ಸಂತ ಜೋಸೆಫರ ಶಾಲೆಯಿಂದ ಮತ ಯಂತ್ರಗಳನ್ನು ರವಾನಿಸಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ವಿವರಿಸಿದರು.

ತಾ. 18ರಂದು (ನಾಳೆ) ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯ ತನಕ ಆಯ ಮತಗಟ್ಟೆಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಿದ್ದು, ಎಲ್ಲರು ಶಾಂತಿಯುತ ಮತದಾನದಲ್ಲಿ ಪಾಲ್ಗೊಂಡು ಚುನಾವಣಾ ಆಯೋಗದ ನೀತಿ ಸಂಹಿತೆ ಪಾಲಿಸುವಂತೆ ಜಿಲ್ಲಾಧಿಕಾರಿ ಜನತೆಗೆ ಕರೆ ನೀಡಿದರು.

ಅಲ್ಲದೆ ಮತಗಟ್ಟೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಕರೆದೊಯ್ಯಲು ಹಾಗೂ ಮರಳಿ ಕರೆ ತರಲು ವಾಹನಗಳ ವ್ಯವಸ್ಥೆ ಕಲ್ಪಿಸಿರುವ ಬಗ್ಗೆ ವಿವರಿಸಿದ ಅವರು, ಈಗಾಗಲೇ ಸಂಬಂಧಪಟ್ಟವರಿಗೆ ಮಾರ್ಗಸೂಚಿ ಬಗ್ಗೆ ತಿಳುವಳಿಕೆ ನೀಡಿರುವದಾಗಿ ವಿವರಣೆ ನೀಡಿದರು. ಈ ಸಂಬಂಧ 90 ರಾಜ್ಯ ಸಾರಿಗೆ ಬಸ್‍ಗಳು 87 ಜೀಪುಗಳು, 51 ಮಿನಿ ಬಸ್ ಮತ್ತು 13 ಮ್ಯಾಕ್ಸಿ ಕ್ಯಾಬ್ ಉಪಯೋಗಿಸ ಲಾಗುವದು ಎಂದ ಅವರು, ವಿಶೇಷ ಚೇತನರಿಗೆ ತಮ್ಮ ಹಕ್ಕು ಚಲಾಯಿಸಲು; ನಂತರ ಮನೆಗಳಿಗೆ ಬಿಡಲು 176 ವಾಹನಗಳನ್ನು ಬಳಸಿಕೊಳ್ಳ ಲಾಗುವದು ಎಂದು ಮಾಹಿತಿಯಿತ್ತರು.

ಜಿಲ್ಲೆಯಲ್ಲಿ ತಾ. 18ರಂದು ಮತದಾನ ಪ್ರಕ್ರಿಯೆ ಪೂರ್ಣ ಗೊಂಡರೂ, ರಾಜ್ಯ ಹಾಗೂ ದೇಶದ ಇತರೆಡೆಗಳಲ್ಲಿ ಚುನಾವಣೆ ಹಂತ ಹಂತವಾಗಿ ನಡೆಯುವ ಮೇರೆಗೆ, ನೀತಿ ಸಂಹಿತೆ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು. ತಾ. 23ರಂದು

(ಮೊದಲ ಪುಟದಿಂದ) ರಾಜ್ಯದಲ್ಲಿ ದ್ವಿತೀಯ ಹಂತದ ಮತದಾನ ನಡೆಯುವ ಕಾರಣ; ತಾ. 22 ಹಾಗೂ 23ರಂದು ಸುದ್ದಿ ಮತ್ತು ಜಾಹೀರಾತು ಪ್ರಕಟಣೆ ಸಂಬಂಧ ನಿಯಮಗಳನ್ನು ಪಾಲಿಸಬೇಕೆಂದು ನೆನಪಿಸಿದರು.

ಅಲ್ಲದೆ ದೇಶದೆÀಲ್ಲೆಡೆ ಬರುವ ಮೇ 19ರ ತನಕ ವಿವಿಧ ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 23 ರಂದು ಮತಗಳ ಎಣಿಕೆ ನಡೆಯುವದ ರೊಂದಿಗೆ; ಮೇ 27ರ ತನಕವೂ ಭಾರತ ಚುನಾವಣಾ ಆಯೋಗದ ನಿರ್ದೇಶನಗಳು ಜಾರಿಯಲ್ಲಿ ಇರಲಿದೆ ಎಂದು ಬೊಟ್ಟು ಮಾಡಿದರು.

ಚುನಾವಣಾ ಮುಂಜಾಗ್ರತಾ ಕ್ರಮ, ಗಡಿಯಲ್ಲಿನ ಭದ್ರತೆ ಚೆಕ್‍ಪೋಸ್ಟ್‍ಗಳ ಕಣ್ಗಾವಲು; ರಕ್ಷಣಾ ಸಿಬ್ಬಂದಿಯ ನಿಯೋಜನೆಗಳ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಮಾಹಿತಿ ನೀಡಿದರು.

ಚುನಾವಣಾ ಬಹಿರಂಗ ಪ್ರಚಾರ ಅಂತ್ಯವಾದ ನಂತರ ಮತದಾನಕ್ಕೆ ಮುನ್ನ 48 ಗಂಟೆ ಮುಂಚಿತವಾಗಿ ಮೈಸೂರು ಲೋಕಸಭಾ ಕ್ಷೇತ್ರದ ಮತದಾರರಲ್ಲದವರು ತಮ್ಮ ಕ್ಷೇತ್ರಕ್ಕೆ ತೆರಳತಕ್ಕದ್ದು.

ಕಲ್ಯಾಣ ಮಂಟಪ, ಸಮುದಾಯಭವನ, ವಸತಿ ಗೃಹಗಳು, ಅತಿಥಿ ಗೃಹಗಳಲ್ಲಿ (ಖಾಸಗಿ), ಈ ಕ್ಷೇತ್ರದ ಮತದಾರರಲ್ಲದವರು ವಾಸ್ತವ್ಯ ಮಾಡಿರುವ ಬಗ್ಗೆ ಪರಿಶೀಲನೆ ನಡೆಸಲಾಗುವದು. ಮತದಾನ ಮುಗಿಯುವ ಸಮಯದ ಹಿಂದಿನ 48 ಗಂಟೆಯ ಅವಧಿಯಲ್ಲಿ ಲೌಡ್ ಸ್ಪಿಕರ್‍ನ ಯಾವದೇ ಕಾರಣಕ್ಕೂ ಬಳಕೆಗೆ ಅನುಮತಿ ಇರುವದಿಲ್ಲ. ಮತದಾನದ ದಿನದಂದು ಚುನಾವಣೆಗೆ ಸಂಬಂಧಿಸಿದಂತೆ ಯಾವದೇ ರೀತಿಯ ವಿಚಾರಣೆ, ದೂರುಗಳನ್ನು ದೂರವಾಣಿ ಸಂಖ್ಯೆ 1950ಗೆ ಕರೆ ಮಾಡಬಹುದಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಅವರು ಮಾತನಾಡಿ ಜಿಲ್ಲೆಯಲ್ಲಿ ಮೂವರು ಡಿವೈಎಸ್‍ಪಿ, 36 ಪೊಲೀಸ್ ಇನ್ಸ್‍ಪೆಕ್ಟರ್‍ಗಳು, 1200 ಪೊಲೀಸ್ ಸಿಬ್ಬಂದಿಗಳು, 500 ಗೃಹರಕ್ಷಕ ದಳದ ಸಿಬ್ಬಂದಿ, ಸಶಸ್ತ್ರ ಪಡೆಗಳಾದ ಬಿಎಸ್‍ಎಫ್, ಡಿಎಆರ್, ಕೆಎಸ್‍ಆರ್‍ಪಿ ನಿಯೋಜಿ ಸಲಾಗಿದೆ. ಜೊತೆಗೆ ಚೀತಾ ಮೊಬೈಲ್ ತಂಡಗಳನ್ನು ನಿಯೋಜಿ ಸಲಾಗಿದೆ. ಎಸ್‍ಎಫ್‍ಟಿ, ಎಫ್‍ಎಸ್‍ಟಿ ಜೊತೆಗೆ ಕಾರ್ಯ ನಿರ್ವಹಿಸಲು ಪೊಲೀಸ್ ತಂಡ ನಿಯೋಜಿಸ ಲಾಗಿದೆ. ಹಾಗೆಯೇ 49 ಸೆಕ್ಟರ್ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅಂತರರಾಜ್ಯ ಗಡಿಪ್ರದೇಶ ಹಾಗೂ ಚೆಕ್‍ಪೋಸ್ಟ್ ಗಳಲ್ಲಿ ಹೆಚ್ಚಿನ ನಿಗಾವಹಿಸಲಾಗಿದೆ. ಶಾಂತಿಯುತ ವಾಗಿ ಚುನಾವಣೆ ನಡೆಸಲು ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ ಕ್ರಮ ಕೈಗೊಂಡಿದೆ ಎಂದು ಹೇಳಿದರು. ಜಿ.ಪಂ.ಸಿಇಒ ಕೆ.ಲಕ್ಷ್ಮಿಪ್ರಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ಅಬಕಾರಿ ಇಲಾಖೆಯ ಅಧಿಕಾರಿ ವೀರಣ್ಣ ಇದ್ದರು.