ಮಡಿಕೇರಿ, ಏ. 16: ನಾಪೆÇೀಕ್ಲು ಕೊಡವ ಸಮಾಜದ ಕ್ರೀಡೆ, ಸಾಂಸ್ಕøತಿಕ ಮತ್ತು ಮನರಂಜನಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಕೊಡವ ಓಪನ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಸಮಾರೋಪ ಸಮಾರಂಭ ನಡೆಯಿತು.
ಖ್ಯಾತ ಸೈಕ್ಲಿಂಗ್ ಕೋಚ್ ಚರಿನ್ ಚರ್ಮಣ, ನಾಪೆÇೀಕ್ಲುವಿನಲ್ಲಿ ಶಟಲ್ ಬ್ಯಾಡ್ಮಿಂಟನ್ ಆಯೋಜಿಸಿರುವದು ಉತ್ತಮ ಬೆಳವಣಿಗೆ ಎಂದು ಆಶಿಸಿದರು. ಸಮಿತಿ ಅಧ್ಯಕ್ಷ ಕಾಂಡಂಡ ಜೋಯಪ್ಪ ಮಾತನಾಡಿ, 40 ವರ್ಷದಿಂದ ಈಚೆಗೆ ಶಟಲ್ ಬ್ಯಾಡ್ಮಿಂಟನ್ ಸಾಕಷ್ಟು ಪ್ರಚಲಿತದಲ್ಲಿದ್ದು, ಗ್ರಾಮದ ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಪ್ರಮುಖ ಅಪ್ಪಚೆÀಟ್ಟೋಳಂಡ ಮನುಮುತ್ತಪ್ಪ ಮಾತನಾಡಿ, ಶಟಲ್ ಬ್ಯಾಡ್ಮಿಂಟನ್ನಲ್ಲಿ ಅಶ್ವಿನಿ ಪೆÇನ್ನಪ್ಪ ಸೇರಿದಂತೆ ಸಾಕಷ್ಟು ಕೊಡಗಿನ ಮಂದಿ ರಾಜ್ಯಮಟ್ಟವನ್ನು ಪ್ರತಿನಿಧಿಸಿದ್ದಾರೆ ಎಂದರು.
ಇದೇ ಸಂದರ್ಭ ಪಂದ್ಯಾವಳಿಯಲ್ಲಿ ಗೆಲವು ಸಾಧಿಸಿದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸೈಕ್ಲಿಂಗ್ನಲ್ಲಿ ಸಾಧನೆಗೈದು ಸೇನೆಯಲ್ಲಿ ಗೌರವ ಹುದ್ದೆ ಪಡೆದ ಚರಿನ್ ಚರ್ಮಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪಂದ್ಯಾವಳಿಯ ಪೋಷಕರಾದ ಕುಲ್ಲೇಟಿರ ಶಂಬು ಮಾದಪ್ಪ, ಪ್ರಮುಖರಾದ ಪೆಮ್ಮುಡಿಯಂಡ ವೇಣು ಅಪ್ಪಣ್ಣ, ಮುಕ್ಕಾಟಿರ ಜಯ, ಕುಲ್ಲೇಟಿರ ಅಜಿತ್ ನಾಣಯ್ಯ, ಸುನಿಲ್ ಹಾಗೂ ಕೊಡವ ಸಮಾಜ ಪದಾಧಿಕಾರಿಗಳು ಪಾಲ್ಗೊಂಡಿದ್ದರು.