ಸಿದ್ದಾಪುರ ಏ.16 : ಮನೆಯ ಅಡುಗೆಕೋಣೆಗೆ ನುಗ್ಗಿದ್ದ ನಾಗರ ಹಾವನ್ನು ರಕ್ಷಿಸಿ ಅರಣ್ಯಕ್ಕೆ ಬಿಡಲಾಗಿದೆ.
ಗುಹ್ಯ ಗ್ರಾಮದ ಗುಹ್ಯ ಎಸ್ಟೇಟ್‍ನ ಮಣಿ ಎಂಬವರ ಮನೆಯ ಅಡುಗೆ ಕೋಣೆಗೆ ಸುಮಾರು ಒಂದೂವರೆ ಅಡಿ ಉದ್ದದ ಗೋದಿ ನಾಗರಹಾವು ನುಗ್ಗಿದ್ದು, ಸ್ಥಳೀಯ ಉರಗಪ್ರೇಮಿ ಸುರೇಶ್ ಎಂಬವರು ನಾಗರಹಾವನ್ನು ರಕ್ಷಿಸಿ, ಸೆರೆಹಿಡಿದು ಸಮೀಪದ ದೇವರಕಾಡಿಗೆ ಬಿಟ್ಟರು.