ಗುಡ್ಡೆಹೊಸೂರು, ಏ. 17: ಇಲ್ಲಿಗೆ ಸಮೀಪದ ಅತ್ತೂರು ಗ್ರಾಮದ ಶ್ರೀ ಪಂಚಲಿಗೇಶ್ವರ ದೇವಸ್ಥಾನದಲ್ಲಿ ತಾ. 18, 19 ಮತ್ತು 20 ರಂದು ವಾರ್ಷಿಕ ಜಾತ್ರಾ ಮಹೋತ್ಸವ ಮತ್ತು ವಿವಿಧ ದೇವತಾ ಕಾರ್ಯಗಳು ನಡೆಯಲಿವೆ. ತಾ. 18ರಂದು ಸಂಜೆ 6 ಗಂಟೆಗೆ ತಕ್ಕರಮನೆಯಿಂದ ಶ್ರೀಕ್ಷೇತ್ರಕ್ಕೆ ಭಂಡಾರ ತರುವದು. 8 ಗಂಟೆಗೆ ದೇವರ ಮಹಾಪೂಜೆ ಮತ್ತು ಪ್ರಸಾದ ವಿನಿಯೋಗ. ತಾ. 19 ಬೆಳಿಗ್ಗೆ 7 ಗಂಟೆಗೆ ಉಷಾ ಪೂಜೆ, ಗಣಪತಿಹೋಮ ನಂತರ ಪುಷ್ಪಾರ್ಚನೆ, ದೀಪ ಪೂಜೆ, ಮಧಾಹ್ನ 1 ಗಂಟೆಗೆ ಅನ್ನಸಂತರ್ಪಣೆ. ಸಂಜೆ 6 ಗಂಟೆಗೆ ತ್ರಾಯಂಭಕ ದೀಪಾರಾಧನೆ, ಸಂಧ್ಯಾ ಪೂಜೆ ದೇವರ ಶ್ರೀಭೂತ ಬಲಿ, ನಡೆಯಲಿದೆ. ತಾ.20 ರಂದು ಬೆಳಿಗ್ಗೆ ವಿವಿಧ ಹೋಮಗಳು ಮತ್ತು 10 ಗಂಟೆಗೆ ಪುಷ್ಪ ದೀಪಾರ್ಚನೆ ಮತ್ತು ಮಹಾಪೂಜೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಯಿಂದ ಅನ್ನಸಂತರ್ಪಣೆ ನಡೆಯಲಿದೆ ದೇವಸ್ಥಾನದಲ್ಲಿ ವಿವಿಧ ಸೇವಾ ಪೂಜೆ ಗಳು ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 8762623286, 9483405923 ಸಂಪರ್ಕಿಸುವಂತೆ ದೇವಸ್ಥಾನ ಆಡಳಿತ ಮಂಡಳಿ ಯವರು ಕೋರಿಕೊಂಡಿದ್ದಾರೆ.