ಕೂಡಿಗೆ, ಏ. 16: ಕೂಡಿಗೆ-ಬಸವನತ್ತೂರು ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚದ ವತಿಯಿಂದ ಬಿಜೆಪಿ ಪರ ಮತಯಾಚನೆಯ ನಡೆಸಲಾಯಿತು. ಕೇಂದ್ರ ಸರಕಾರದ ಯೋಜನೆಗಳ ಕರಪತ್ರಗಳನ್ನು ಮನೆ ಮನೆಗಳಿಗೆ ಹಂಚುವ ಮೂಲಕ ಕೂಡಿಗೆ, ಬಸವನತ್ತೂರು, ಕೂಡುಮಂಗಳೂರು ವ್ಯಾಪ್ತಿಗಳಲ್ಲಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮಹಿಳಾ ಮೋರ್ಚದ ಅಧ್ಯಕ್ಷೆ ಸಾವಿತ್ರಿರಾಜು, ಕಾರ್ಯದರ್ಶಿ ಕೆ.ಕನಕ ಸೇರಿದಂತೆ ಪದಾಧಿಕಾರಿಗಳು, ಪಕ್ಷದ ಬೂತ್ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.