ಕೂಡಿಗೆ, 16: ಕೂಡಿಗೆ-ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿ,ಜೆ,ಪಿ, ಸಮಿತಿಯ ವತಿಯಿಂದ ರೋಡ್ ಶೋ ಪ್ರದರ್ಶನ ನಡೆಯಿತು. ಈ ಎರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರು, ಪಕ್ಷದ ಪ್ರಮುಖರು ಮೆರವಣಿಗೆಯಲ್ಲಿ ಸಾಗಿದರು.
ಕೂಡಿಗೆ ಡೈರಿ ಸರ್ಕಲ್ ಮೂರ್ಗವಾಗಿ ಹಾಸನ ಹೆದ್ದಾರಿ ಮೂಲಕ ಕೂಡುಮಂಗಳೂರು ಗ್ರಾಮದ ಮುಖಾಂತರ ಕೂಡ್ಲೂರು ಕೈಗಾರಿಕಾ ಕೇಂದ್ರದ ಸರ್ಕಲ್‍ವರೆÀಗೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರತಾಪ್ ಸಿಂಹÀ ಪರ ಮತಯಾಚನೆ ನಡೆಸಿದರು. ತಾಲೂಕು ಕಾರ್ಯದರ್ಶಿ P.É ವರದ, ಕೆ.ಕೆ. ಬೋಗಪ್ಪ, ಕಿರಣ, ಎಂ. ಬಿ.ಜಯಂತ್, ಮಹಿಳಾ ಶಕ್ತಿ ಕೇಂದ್ರದ ಅಧ್ಯಕ್ಷೆ ಸಾವಿತ್ರಿ ರಾಜ, ಕೂಡುಮಂಗಳೂರು, ಕೂಡಿಗೆ-ಬೂತ್ ಸಮಿತಿಯ ಅಧ್ಯಕ್ಷರುಗಳು ಗ್ರಾಮ ಪಂಚಾಯತಿಯ ಸದಸ್ಯರುಗಳು, ವಿವಿಧ ಘಟಕ ಗಳು ಅಧ್ಯಕ್ಷರುಗಳ ಭಾಗವಹಿಸಿದ್ದರು.