ಚೆಟ್ಟಳ್ಳಿ, ಏ. 16: ರಾಷ್ಟ್ರೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳಲ್ಲಿ ಮದ್ಯ ಮುಕ್ತ ರಾಷ್ಟ್ರವಿಲ್ಲದ ವಿಷಯ ಖೇದಕರವಾಗಿದೆ ಎಂದು ಕೊಡಗು ಜಿಲ್ಲಾ ಎಸ್.ಎಸ್.ಎಫ್ ಉಪಾಧ್ಯಕ್ಷ ಶಾಫಿ ಸಹದಿ ಹೇಳಿದರು. ಕೊಟ್ಟಮುಡಿಯ ಅರಬಿ ತಂಙಲ್ ಮಖಾಂ ಉರೂಸ್ ಪ್ರಯುಕ್ತ ನಡೆದ ಸಾರ್ವಜನಿಕ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.

ಸಮಾಜದ ಹಾಗೂ ದೇಶದ ಸ್ವಾಸ್ಥ್ಯವನ್ನು ಕ್ಷೇಮ ರಾಷ್ಟ್ರದ ಅಭಿವೃದ್ಧಿಗೆ ಕುಂದನ್ನುಂಟುಮಾಡುವ , ಪ್ರಮುಖವಾದ ಅಂಶವಾಗಿದೆ ಮದ್ಯಪಾನ ಅಥವಾ ಮಾದಕ ದ್ರವ್ಯಗಳ ಬಳಕೆ. ಅದನ್ನೇ ಮುಕ್ತ ಮಾಡುವ ವಿಷಯವನ್ನು ತಮ್ಮ ಪ್ರಣಾಳಿಕೆಗಳಲ್ಲಿ ಒಳಪಡಿಸದಿರುವದು ನಿಜಕ್ಕೂ ಖೇದಕರವಾಗಿದೆ ಎಂದರು.

ಇಂದಿನ ಕಾಲಘಟ್ಟದಲ್ಲಿ ಯುವಜನಾಂಗವು ಮಾದಕ ವಸ್ತುಗಳಿಗೆ ಬಲಿಯಾಗಿ ಮಾರಕ ರೋಗಗಳಿಗೆ ಬಲಿಯಾಗುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲಾ ಸಂಘಟನೆಗಳು ಎಚ್ಚರವಹಿಸಿ ಅದರ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕಿದೆ ಎಂದರು.

ಮಾದಕ ವಸ್ತುಗಳನ್ನು ಪೂರೈಸುವವರ ವಿರುಧ್ದ ಕ್ರಮಕೈಗೊಳ್ಳಬೇಕಾಗಿದೆ. ಮನುಷ್ಯರು ಪರಸ್ಪರ ,ದ್ವೇಷ ,ಅಸೂಯೆ ಇವೆಲ್ಲವನ್ನೂ ಬಿಟ್ಟು ಪರಸ್ಪರ ಸಹೋದರರಂತೆ ಬಾಳಬೇಕಾಗಿದೆ. ಇಸ್ಲಾಂ ಸಂಘಟನೆಯನ್ನು ಪ್ರವಾದಿ ಪೈಗಂಬರರ ನೈಜ ಸಿದ್ಧಾಂತದಿಂದ ಕಲಿಯಬೇಕು ಎಂದರು.

ನಂತರ ನಡೆದ ದಿಕ್ರ್ಸ್‍ದುಆ ಮಜ್ಲಿಸ್ ಕಾರ್ಯಕ್ರಮದ ನೇತೃತ್ವವನ್ನು ಸಯ್ಯದ್ ಕಿಲ್ಲೂರ್ ತಂಙಲ್ ವಹಿಸಿ ಪ್ರಾರ್ಥನೆ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಖಾಸಿಂ ರವರು ವಹಿಸಿದ್ದರು. ಈ ಸಂದರ್ಭ ವೇದಿಕೆಯಲ್ಲಿ ಶುಹೈಬುದ್ದೀನ್ ನೂರಾನಿ, ಇಸ್ಮಾಯಿಲ್ ಸಖಾಫಿ , ಅಸ್ಕರ್ ಸಖಾಫಿ ಇದ್ದರು.