ಒಡೆಯನಪುರ, ಏ. 16: ಸಮೀಪದ ಗೋಪಾಲಪುರ ಶ್ರೀ ಬನಶಂಕರಿ ಅಮ್ಮನವರ 21ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ ಇಂದಿನಿಂದ ಪ್ರಾರಂಭಗೊಂಡಿದ್ದು, ಎರಡು ದಿನಗಳ ವರೆಗೆ ನಡೆಯಲಿದೆ. ಪೂಜಾ ಮಹೋತ್ಸª ಪ್ರಯುಕ್ತ ಶ್ರೀ ಬನಶಂಕರಿ ಅಮ್ಮನವರ ದೇವಸ್ಥಾನದಲ್ಲಿ ಮಹಾ ಗಣಪತಿ ಪೂಜೆ, ಶ್ರೀ ವೀರಭದ್ರೇಶ್ವರಸ್ವಾಮಿ ಪೂಜಾ, ನವಗ್ರಹ ಪೂಜಾ ಪೂರ್ವಕ ಶ್ರೀ ಬನಶಂಕರಿ ಅಮ್ಮನವರಿಗೆ ಫಲ ಪಂಚಾಮೃತ ಅಭಿಷೇಕ, ದುರ್ಗಾಸೂಕ್ತ, ಶ್ರೀಸೂಕ್ತ, ಜಲಾಭಿಷೇಕ ಹಾಗೂ ಅಲಂಕಾರ ಸೇವೆ ಸಲ್ಲಿಸಲಾಯಿತು. ಮಹಾ ಗಣಪತಿ ಹೋಮ, ನವಗ್ರಹ ಹೋಮ, ದುರ್ಗಾವಾಸ್ತು, ಮೃತ್ಯುಂಜಯ, ಬ್ರಹ್ಮ, ವಿಷ್ಣು, ಮಹೇಶ್ವರಾದಿ ಪೂಜೆ ಹಾಗೂ ದುರ್ಗಾ ಹೋಮ ನಡೆಸಲಾಯಿತು. ಮಧ್ಯಾಹ್ನ ಪೂರ್ಣಾಹುತಿ ಮತ್ತು ಅಭಿಷೇಕ, ದುರ್ಗಾಸೂಕ್ತ, ಶ್ರೀಸೂಕ್ತ, ಜಲಾಭಿಷೇಕ ಹಾಗೂ ಅಲಂಕಾರ ಸೇವೆ ಸಲ್ಲಿಸಲಾಯಿತು. ಮಹಾ ಗಣಪತಿ ಹೋಮ, ನವಗ್ರಹ ಹೋಮ, ದುರ್ಗಾವಾಸ್ತು, ಮೃತ್ಯುಂಜಯ, ಬ್ರಹ್ಮ, ವಿಷ್ಣು, ಮಹೇಶ್ವರಾದಿ ಪೂಜೆ ಹಾಗೂ ದುರ್ಗಾ ಹೋಮ ನಡೆಸಲಾಯಿತು.