ಗೋಣಿಕೊಪ್ಪ ವರದಿ, ಏ. 16 : ಬಿಟ್ಟಂಗಾಲದಲ್ಲಿ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಸುಮಾರು 6 ಎಕರೆಗೂ ಅಧಿಕ ಕೃಷಿ ಗದ್ದೆ ಬೆಂಕಿಗೆ ಆಹುತಿಯಾಗಿದೆ. ಮಂಗಳವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಹೆದ್ದಾರಿ ಒತ್ತಿನಲ್ಲಿದ್ದ ಗದ್ದೆಗೆ ಬೆಂಕಿ ಕಾಣಿಸಿಕೊಂಡಿತು. ಒಣಗಿದ ಹುಲ್ಲು ಹೆಚ್ಚಿದ್ದ ಕಾರಣ ಹೆಚ್ಚು ಪ್ರಮಾಣದ ಬೆಂಕಿ ಹೊತ್ತಿಕೊಂಡು ಆತಂಕ ಮೂಡಿಸಿತು. ಗೋಣಿಕೊಪ್ಪ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳೀಯರ ಸಹಕಾರದಲ್ಲಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು. ಕೊಡಗು - ಕೇರಳ ಸಂಪರ್ಕಿಸುವ ಹೆದ್ದಾರಿಯ ಒತ್ತಿನಲ್ಲಿ ಘಟನೆ ನಡೆದಿರುವದರಿಂದ ಹೆಚ್ಚಿನ ವಾಹನಗಳು ಓಡಾಟ ಹೆಚ್ಚಿತ್ತು. ಬೆಂಕಿ ಆವರಿಸಲು ಆತಂಕ ಮೂಡಿಸಿತ್ತು.