ಶಾಸಕ ಹ್ಯಾರಿಸ್ ಆರೋಪ
ಮಡಿಕೇರಿ, ಏ. 16: ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯುವ ಜನತೆಯ ಭಾವನೆಗಳನ್ನು ಅಧಿಕಾರಕ್ಕಾಗಿ ದುರ್ಬಳಕೆ ಮಾಡಿಕೊಂಡು ಮೋಸ ಮಾಡಿದೆ ಎಂದು ಶಾಸಕ ಹಾಗೂ ಕಾಂಗ್ರೆಸ್ ನಾಯಕ ಹ್ಯಾರಿಸ್ ಆರೋಪಿಸಿದರು. ಇತ್ತೀಚೆಗೆ ಮಡಿಕೇರಿಗೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಸರ್ಕಾರ ಇದೆ ಎಂಬ ಕಾರಣಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಎಸ್‍ಪಿಜಿ ಭದ್ರತೆಯನ್ನು ಕಡಿಮೆ ಮಾಡಲಾಗಿದೆ ಎಂದು ದೂರಿದರು. ಬಿಜೆಪಿ ನೀಡಿದ್ದ ಭರವಸೆಗಳೆಲ್ಲ ಹುಸಿಯಾಗಿವೆ. ಕೊಡಗಿನ ಕಾಫಿ, ಕರಿಮೆಣಸು ವಿಚಾರದಲ್ಲೂ ಕೊಡಗಿನ ಜನತೆಗೆ ಮೋದಿ ಸರ್ಕಾರ ಅನ್ಯಾಯವೆಸಗಿದೆ ಎಂದು ಹ್ಯಾರಿಸ್ ಆಪಾದಿಸಿದರು.