ಮಡಿಕೇರಿ, ಏ. 16: ಶ್ರೀಮಂಗಲದಲ್ಲಿ ಇಂದು ಬಿಜೆಪಿ ವತಿಯಿಂದ ಸಂಸದ ಪ್ರತಾಪ್ ಸಿಂಹ ಪರವಾಗಿ ಬಹಿರಂಗ ಸಭೆ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆಯಿತು ಕೊಡಗು ಜಿಲ್ಲಾ ಭೌದಿಕ್ ಸಂಚಾಲಕ ಟಿ.ಸಿ. ಚಂದ್ರ ಬಿಜೆಪಿಗೆ ಮತಹಾಕಬೇಕಾದ ಅಗತ್ಯತೆಯನ್ನು ಹೇಳಿದರು.
ತಾಲೂಕು ಅಧ್ಯಕ್ಷ ಅರುಣ್ ಭೀಮಯ್ಯ ಕುಂಞಂಗಡ, ಸ್ಥಾನೀಯ ಸಮಿತಿ ಅಧ್ಯಕ್ಷ ಕಾಳಿಮಾಡ ತಮ್ಮ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬೊಟ್ಟಂಗಡ ರಾಜು, ಎಪಿಎಂಸಿ ಮಾಜಿ ಉಪಾಧ್ಯಕ್ಷ ಕಳ್ಳಂಗಡ ಬಾಲಕೃಷ್ಣ, ವೀರಾಜಪೇಟೆ ಸಾಮಾಜಿಕ ಜಾಲತಾಣ ಸಂಚಾಲಕ ಸಚಿನ್ ಪೆಮ್ಮಯ್ಯ ಚಿರಿಯಪಂಡ, ಸಹ ಸಂಚಾಲಕ ಮಹೇಶ್ ಮಂದಣ್ಣ ಚಟ್ಟಂಗಡ ಹಾಗೂ ಇತರ ಬಿಜೆಪಿ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.