ಕರಿಕೆ, ಏ. 15: ಲೋಕಸಭಾ ಚುನಾವಣೆ ಸುಗಮವಾಗಿ ಹಾಗೂ ಅಂಗವಿಕಲರು, ವಯಸ್ಕರು, ಅನಾರೋಗ್ಯ ಪೀಡಿತರು ಸೇರಿದಂತೆ ಪ್ರತಿಯೊಬ್ಬ ಪ್ರಜೆಯು ಮತದಾನದಲ್ಲಿ ಪಾಲ್ಗೊಳ್ಳಲು ಸಹಕಾರಿಯಾಗುವಂತೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶಿಸಿದ್ದರು. ಕೊಡಗು ಜಿಲ್ಲೆಯಾದ್ಯಂತ ಚುನಾವಣಾ ಕರ್ತವ್ಯಕ್ಕೆ ವಾಹನ ನಿಯೋಜನೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಹೊರಡಿಸಿರುವ ಆದೇಶದಂತೆ ಮಡಿಕೇರಿ ಸಾರಿಗೆ ಆಯುಕ್ತ ಗುರು ಮೂರ್ತಿ ಅವರು ಇಂದು ಮಡಿಕೇರಿ ತಾಲೂಕಿನ ಮದೆನಾಡು, ಸಂಪಾಜೆ, ಪೆರಾಜೆ, ಕರಿಕೆ, ಭಾಗಮಂಡಲ, ಚೇರಂಬಾಣೆ ಸೇರಿದಂತೆ ಇತರ ಪಂಚಾಯತಿ ವ್ಯಾಪ್ತಿಯ ಮತಗಟ್ಟೆಗಳಿಗೆ ಭೇಟಿ ನೀಡಿ ಖಾಸಗಿ ವಾಹನಗಳನ್ನು ನಿಯೋಜನೆ ಮಾಡಿ ಚಾಲಕರಿಗೆ ಆದೇಶ ಪತ್ರ ನೀಡಿದರು.