ಹೊದ್ದೂರು, ಏ. 16 : ಮೂರ್ನಾಡುವಿಗೆ ಸನಿಹದ ಹೊದ್ದೂರುವಿನ ಅಯ್ಯಪ್ಪ ಕಾಲೋನಿಯಲ್ಲಿ ಪಾಷಾಣಮೂರ್ತಿ ಮತ್ತು ಇತರ ದೈವಗಳ ವಾರ್ಷಿಕ ದೈವೋತ್ಸವ ತಾ. 18 ಮತ್ತು 19ರಂದು ನಡೆಯಲಿದೆ.

ಈ ಪ್ರಯುಕ್ತ ತಾ. 18ರಂದು ಬೆಳಿಗ್ಗೆ 6 ಘಂಟೆಗೆ ಸ್ಥಳ ಶುದ್ಧಿ, 7 ರಿಂದ ಗಣಪತಿ ಹವನ, 8 ರಿಂದ ವಿಶೇಷ ಪೂಜೆ, ದೈವದರ್ಶನ ನಡೆಯಲಿದೆ. ಮಧ್ಯಾಹ್ನ 12ಕ್ಕೆ ದೈವ ನರ್ತಕರ ಆಗಮನ, 1 ಘಂಟೆಯ ನಂತರ ದಾನಿಗಳ ಪ್ರಾಯೋಜಿತ ಸಾಮೂಹಿಕ ಅನ್ನದಾನ ನಡೆಯಲಿದೆ.

ಸಂಜೆ 7 ಗÀಂಟೆಗೆ ಭಂಡಾರ ತೆಗೆಯುವದು, ರಾತ್ರಿ 8ಘಂಟೆಯ ನಂತರ ಸಾಮೂಹಿಕ ಅನ್ನದಾನ, 9 ಘಂಟೆಯಿಂದ ಶ್ರೀಧರ್ಮದೈವ ಪಂಜುರ್ಲಿ ದೈವೋತ್ಸವ, 11 ಗಂಟೆಯ ನಂತರ ಕಲ್ಕುಡ, ಪಾಷಾಣಮೂರ್ತಿ ದೈವಗಳ ದೈವೋತ್ಸವ ತಾ. 19ರಂದು ಮುಂಜಾನೆ 3 ಘಂಟೆಯ ನಂತರ ಹರಕೆ ಕೋಲ ನಡೆಯಲಿದೆ.