ವೀರಾಜಪೇಟೆ, ಏ. 19: ಶ್ರೀ ಅರಮೇರಿ ಮಠದಲ್ಲಿ ‘ದಿಶಾ’ ಫೌಂಡೇಶನ್‍ನಿಂದ ಬೇಸಿಗೆ ಶಿಬಿg Àವನ್ನು ಆಯೋಜಿಸಲಾಗಿತ್ತು. ಮಕ್ಕಳು ತಪ್ಪು ಪ್ರೇರಣೆಗೆ ಒಳಗಾಗದೆ, ಸೂಕ್ತ ಆಯ್ಕೆಯನ್ನು ಮಾಡಿಕೊಳ್ಳಲು ತಮ್ಮನ್ನೇ ಪ್ರತಿಸ್ವರ್ಧಿ ಯಾಗಿ ಕಂಡುಕೊಳ್ಳುವ ಸಾಮಥ್ರ್ಯವನ್ನು ಅರಿತುಕೊಳ್ಳುವ, ಮೌಲ್ಯಯುತ ಜೀವನದೆಡೆಗೆ ಪ್ರೇರೇಪಿಸುವ ನೇಚರ್ ವಾಕ್, ಟ್ರೆಕ್ಕಿಂಗ್, ಯುಗಾದಿ ಆಚರಣೆ, ಚಿಂತನ, ಕಾರ್ಯಾಗಾರ ಮುಂತಾದ ಚಟುವಟಿಕೆಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಲ್ಲಿ ಸಾಮಾಜಿಕ, ಮಾನಸಿಕ, ದೈಹಿಕ, ಆಧ್ಯಾತ್ಮಿಕ ಬದಲಾವಣೆಗಳನ್ನು ಕಂಡುಕೊಳ್ಳುವಲ್ಲಿ ತರಬೇತಿ ನೀಡಲಾಯಿತು.
ಶಿಬಿರದಲ್ಲಿ ಕೊಡಗು ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಪಾಲ್ಗೊಂಡು ಇದರ ಸದುಪಯೋಗ ಪಡೆದು ಕೊಂಡರು. ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾರ್ಗದರ್ಶನ ನೀಡಿದರು. ಜೀವನ ಕೌಶಲ್ಯ ತರಬೇತುದಾರ ಎನ್.ಜಿ. ಪ್ರೀತಂ ಪೊನ್ನಪ್ಪ ಹಾಗೂ ಶಿಕ್ಷಣ ತಜ್ಞ ಕೆ.ಪಿ. ಕುಸುಮ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.