ಕುಶಾಲನಗರ, ಏ. 18: ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ಭಾರೀ ಮಳೆ ಸುರಿದಿದೆ. ಗುಡುಗು, ಗಾಳಿ ಮಿಶ್ರಿತ ಮಳೆಯಿಂದ ಜನಜೀವನ ಅಸ್ತವ್ಯಸ್ಥಗೊಂಡಿತ್ತು. ಸಂಜೆ 6 ರ ಮೇಲೆ ಮಳೆ ಸುರಿದ ಕಾರಣ ಮತದಾನ ಮಾಡಲು ಬಂದು ಹಿಂತಿರುಗಿದ ಜನರಿಗೆ ಅನಾನುಕೂಲ ಉಂಟಾಯಿತು.
ಸುಮಾರು 1 ಗಂಟೆ ಕಾಲ ಸತತವಾಗಿ ಮಳೆ ಸುರಿದಿದ್ದು ಹಾರಂಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಮೀಪ ಮನೆಯೊಂದು ಕುಸಿದ ಬಗ್ಗೆ ವರದಿಯಾಗಿದ್ದು ಯಾವದೇ ರೀತಿಯ ಅಪಾಯ ಸಂಭವಿಸಿಲ್ಲ.