ಮಡಿಕೇರಿ, ಏ. 18: ಜಿಲ್ಲೆಯಾದ್ಯಂತ ಮತದಾನ ಬಿರುಸು ಕಂಡು ಬಂದರೆ.., ಇತ್ತ ಕಾನನದ ನಡುವಿನ ಕಾಡುದಾರಿಯಲ್ಲಿ ಪ್ರವಾಸಿಗರಾಗಿ ಆಗಮಿಸಿದ್ದ ಅಸ್ಸಾಂ ಮೂಲದ ಕ್ರೀಡಾಪಟುಗಳು ಸೈಕಲ್ಲನ್ನೇರಿ ಸವಾರಿ ಮಾಡುತ್ತಿದ್ದುದು ಕಂಡು ಬಂದಿತು.
ವಣಚಲುವಿಗೆ ತೆರಳುವ ದುರ್ಗಮ ಹಾದಿಯಲ್ಲಿ ಸಿಕ್ಕ ಪ್ರವಾಸಿಗರನ್ನು ‘ಶಕ್ತಿ’ ಮಾತನಾಡಿಸಿದಾಗ, ಅವರುಗಳು ಅಸ್ಸಾಂನವರಾಗಿದ್ದು, ದುಬೈ, ಬೆಂಗಳೂರು, ದೆಹಲಿ ಮುಂತಾದೆಡೆ ನೆಲೆಸಿದ್ದು, ಟೆನ್ನಿಸ್ ಆಟಗಾರರಾಗಿರುವ ಅವರುಗಳು ಒಟ್ಟು ಸೇರಿ ಪ್ರವಾಸ ಬಂದಿರುವದಾಗಿ ಹೇಳಿದರು. ಅಸ್ಸಾಂನಲ್ಲಿ ತಾ. 23 ರಂದು ಮತದಾನ ನಡೆಯಲಿದ್ದು, ಅಂದು ಅಲ್ಲಿಗೆ ತೆರಳಿ ಮತ ಚಲಾಯಿಸುವದಾಗಿ ಹೇಳಿದರು. ತಂಡದಲ್ಲಿ ರಿಂಕು, ರಾಜ್ ಹಜಾರಿಕಾ, ಚಂದೀಪ್ ಇತರರಿದ್ದರು.