ಗೋಣಿಕೊಪ್ಪ ವರದಿ, ಏ. 18 : ಗುರುವಾರ ಸಂಜೆ 6 ಗಂಟೆ ಸುಮಾರಿಗೆ ವರುಣನ ಅಗಮನ ಮೂಲಕ ಚುನಾವಣೆ ಕಾವು ತಂಪಾ ಯಿತು. ದಕ್ಷಿಣ ಕೊಡಗಿನ ಬಹುತೇಕ ಗ್ರಾಮಗಳಲ್ಲಿ ಮಳೆಯಾಯಿತು.
ಬೆಸಗೂರು ಗ್ರಾಮಕ್ಕೆ 5 ಗಂಟೆ ಸುಮಾರಿಗೆ ಧಾರಾಕಾರ ಮಳೆ ಸುರಿಯಿತು. ಬಿರುನಾಣಿ, ಮಾಯಮುಡಿ, ಕೋಟೂರು, ಬಲ್ಯಮುಂಡೂರು, ಬೆಕ್ಕೆಸೊಡ್ಲೂರು, ಬಿಳೂರು, ಪೊನ್ನಪ್ಪಸಂತೆ, ದೇವನೂರು, ಕುಂದ, ಹಳ್ಳಿಗಟ್ಟು, ನಾಲ್ಕೇರಿ, ಚೂರಿಕಾಡ್, ಬಾಡಗರಕೇರಿ, ಪೊನ್ನಂಪೇಟೆ ಭಾಗಗಳಲ್ಲಿ ಉತ್ತಮ ಮಳೆಯಾಗಿರುವ ಕುರಿತು ವರದಿಯಾಗಿದೆ.
ಮತದಾನ ಮುಗಿಯುವ ಸಮಯದಲ್ಲಿ ಮಳೆಯಾದ ಕಾರಣ ಮತ ಚಲಾವಣೆಗೆ ತೊಡಕ್ಕಾಗಲಿಲ್ಲ. ಗುಡುಗು ಮಾತ್ರ ಭಯ ಮೂಡಿಸಿತ್ತು. ರಾತ್ರಿ 7 ಗಂಟೆ ಸಮಯದಲ್ಲಿ ಮಡಿಕೇರಿ ಸುತ್ತಮುತ್ತಲೂ ವರುಣನ ದರ್ಶನವಾಯಿತು. -ಸುದ್ದಿಪುತ್ರ