ಚೆಟ್ಟಳ್ಳಿ, ಏ. 18: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರು ಮತಗಟ್ಟೆಯಲ್ಲಿ ಶಾಂತಿಯುತ ಮತದಾನವಾಗಿದೆ. ಬೆಳಗ್ಗೆ 7 ಗಂಟೆಯಿಂದಲೇ ಮತದರಾರು ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು ಚೆಟ್ಟಳ್ಳಿ ಭಾಗದ ಆರು ಮತಗಟ್ಟೆಯಲ್ಲಿ ಕಂಡು ಬಂತು. ಜಿಲ್ಲಾಡಳಿತ ವತಿಯಿಂದ ವಿಶೇಷಚೇತನರಿಗೆ ಹಾಗೂ ವೃದ್ಧರಿಗೆ ವಿಶೇಷ ವಾಹನ ಸೌಲಭ್ಯ ಏಪರ್Àಡಿಸಲಾಗಿತ್ತು.

ಗ್ರಾಮ ಪಂಚಾಯತಿ ವ್ಯಾಪ್ತಿಯ ಆರು ಮತಗಟ್ಟೆಗಳಲ್ಲಿ ಉತ್ತಮ ಮತದಾನವಾಗಿದೆ. ಕಂಡಕರೆ ಮತಗಟ್ಟೆ 78% , ಪೊನ್ನತ್ ಮೊಟ್ಟೆ 73% , ಈರಳವಳಮುಡಿ 82% ,ಕುಡ್ಲೂರು ಚೆಟ್ಟಳ್ಳಿ 82% , ಕಾಫಿಬೋರ್ಡ್ 69% ಹಾಗೂ ಚೆಟ್ಟಳ್ಳಿ ಮತಗಟ್ಟೆಯಲ್ಲಿ ಶೇಕಡ 73%ರಷ್ಟು ಮತದಾನವಾಗಿದೆ.