ಮಡಿಕೇರಿ, ಏ. 19: ಮಂಗಳೂರು ವಿಶ್ವವಿದ್ಯಾನಿಲಯದ ಜೀವ ವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ದೀಪ್ತಿ ಡಿಸೋಜ ಅವರು ಮಂಡಿಸಿದ ಮೋಲಿಕ್ಯೂಲಾರ್ ಮತ್ತು ನ್ಯೂರಲ್ ಕೋರಿಲೇಟ್ಸ್ ಆಫ್ ಆಡೋ ಲೆಸೆಂಟ್ ಡಿಪ್ರೆಶನ್ ಇನ್ ಫೀಮೇಲ್ಸ್ -ಎ ಸ್ಟಡಿ ಇನ್‍ದ ವಿಸ್ಟಾರ್ ಕ್ಯೋಟೋರ್ಯಾಟ್ ಎಂಬ ಪ್ರಬಂಧಕ್ಕೆ ಮಂಗಳೂರು ವಿ.ವಿ ಪಿ.ಎಚ್.ಡಿ. ಪದವಿ ನೀಡಿದೆ.

ಅವರು ಜೀವ ವಿಜ್ಞಾನ ವಿಭಾಗದ ಪ್ರೊಫೇಸರ್ ಮೋನಿಕಾ ಸದಾನಂದ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು.

ದೀಪ್ತಿ ಎಲ್.ಐ.ಸಿ. ಉದ್ಯೋಗಿಯಾಗಿದ್ದ ದಿವಂಗತ ಫೆಲಿಕ್ಸ್ ಡಿಸೋಜ ಮತ್ತು ಪ್ರಸ್ತುತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂರ್ನಾಡಿನ ಶಿಕ್ಷಕಿಯಾದ ಹೆಲೆನ್ ಡಿಸೋಜರವರ ಪುತ್ರಿ.