ಮಡಿಕೇರಿ, ಏ. 18: ಮತದಾನದಂದು ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಬೆಳಿಗ್ಗೆಯಿಂದಲೇ ದೇವಸ್ಥಾನಗಳಿಗೆ ತೆರಳಿ ನಂತರ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.ನಗರದ ಶ್ರೀ ವಿಜಯ ವಿನಾಯಕ ದೇವಾಲಯದಲ್ಲಿ ಮುಂಜಾನೆ 5 ರಿಂದ 7.30ರವರೆಗೆ ವಿಶೇಷ ಪೂಜೆ ಹಾಗೂ ಹೋಮಗಳನ್ನು ನೆರವೇರಿಸಿದ ಸಿಂಹ ಈ ಹಿಂದಿನ ಚುನಾವಣಾ ಸಂದರ್ಭದಲ್ಲಿ (ಮೊದಲ ಪುಟದಿಂದ) ಇಲ್ಲಿ ಆಶೀರ್ವಾದ ಪಡೆದ ಬಗ್ಗೆ ನೆನಪಿಸಿಕೊಂಡರು. ದೇವಾಲಯದ ಪ್ರಧಾನ ಅರ್ಚಕ ಕೃಷ್ಣ ಉಪಾಧ್ಯ ಅವರು ಹೋಮ ಹವನಾದಿಗಳನ್ನು ನಡೆಸಿಕೊಟ್ಟರೆ, ಸಹಾಯಕ ಅರ್ಚಕ ಕೃಷ್ಣ ಕಾರಂತ್ ಇವರೊಂದಿಗೆ ಕೈಜೋಡಿಸಿದರು. ಪೂಜಾ ಸಂದರ್ಭ ಬಿಜೆಪಿ ಪ್ರಮುಖರಾದ ಪಿ.ಡಿ. ಪೊನ್ನಪ್ಪ, ಮಹೇಶ್ ಜೈನಿ, ಬಿ.ಕೆ. ಅರುಣ್‍ಕುಮಾರ್, ಸಜಿಲ್ ಕೃಷ್ಣ ಹಾಗೂ ಶ್ರೀಕಾಂತ್ ಪಾಲ್ಗೊಂಡಿದ್ದರು.