ಕುಶಾಲನಗರ, ಏ. 18: ಬಸ್ ಮತ್ತು ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ರಂಗಸಮುದ್ರ ಸಮೀಪ ನಡೆದಿದೆ.
ಕಲ್ಕತ್ತಾ ಮೂಲದ ಪ್ರವಾಸಿ ದಂಪತಿಗಳ ಬುಲೆಟ್ ಬೈಕ್‍ಗೆ ಬಸ್ ಡಿಕ್ಕಿಯಾಗಿದ್ದು ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತ್ನಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುಶಾಲನಗರದಿಂದ ದುಬಾರೆ ಕಡೆಗೆ ತೆರಳುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ.
ಬೆಂÀಗಳೂರಿನಿಂದ ಪತ್ನಿಯೊಂದಿಗೆ ಬಾಡಿಗೆ ಬುಲೆಟ್ ಬೈಕ್ (ಕೆಎ.03.ಎಸಿ.6148) ಮೂಲಕ ತೆರಳುತ್ತಿದ್ದ ಸಂದರ್ಭ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಬಸ್ (ಕೆಎ.20.ಎಎ.6415) ನಡುವೆ ಅಪಘಾತ ಸಂಭವಿಸಿದ್ದು ಸಾವಿಗೀಡಾದ ವ್ಯಕ್ತಿಯ ಬಗ್ಗೆ ಇನ್ನೂ ಮಾಹಿತಿ ದೊರಕಿಲ್ಲ. ತೀವ್ರ ಅಸ್ವಸ್ಥಗೊಂಡ ಮಹಿಳೆಯನ್ನು ಕುಶಾಲನಗರ ಆಸ್ಪತ್ರೆಗೆ ಸಾಗಿಸಲಾಗಿದೆ. ಕುಶಾಲನಗರ ಸಂಚಾರಿ ಪೊಲೀಸರು ಕ್ರಮಕೈಗೊಂಡಿದ್ದಾರೆ.