ಮಡಿಕೇರಿ, ಏ. 19: ವಿಶ್ವಕರ್ಮ ಸೇವಾ ಸಂಘ ಮತ್ತು ಮಹಿಳಾ ಸಂಘದ ಆಶ್ರಯದಲ್ಲಿ ವಿಶ್ವಕರ್ಮ ಸಮುದಾಯದ ಮಳೆ ಹಾನಿ ಸಂತ್ರಸ್ತರಿಗೆ ಆರ್ಥಿಕ ನೆರವು ನೀಡಲಾಯಿತು.

ಮಂಗಳೂರಿನ ಕಾಳಿಕಾಂಬ ವಿನಾಯಕ ದೇವಸ್ಥಾನದ ಆಡಳಿತ ಮಂಡಳಿ ನೀಡಿದ ರೂ. 1 ಲಕ್ಷ ಹಾಗೂ ಇ.ಎಲ್. ಸುರೇಶ್ ಆಚಾರ್ಯ ಅವರ ಪುತ್ರ ಇ.ಎಸ್. ರಕ್ಷಿತ್ ನೀಡಿದ ರೂ. 15 ಸಾವಿರಗಳನ್ನು ಸುಮಾರು 20 ನೆರೆ ಸಂತ್ರಸ್ತರಿಗೆ ವಿತರಿಸಲಾಯಿತು.