ವೀರಾಜಪೇಟೆ, ಏ. 20: ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಕಿ ಟ್ರಸ್ಟ್ ವೀರಾಜಪೇಟೆ ಇವರ ವತಿಯಿಂದ ನಡೆಯುತ್ತಿರುವ 25ನೇ ವರ್ಷದ ಹಾಕಿ ತರಬೇತಿ ಶಿಬಿರ ತಾ. 21ರಂದು (ಇಂದು) ಮುಕ್ತಾಯಗೊಳ್ಳಲಿದೆ.
ಬೆಳ್ಳಿಹಬ್ಬದ ಪ್ರಯುಕ್ತ ನಡೆಸಿದ ಹಾಕಿ ಪಂದ್ಯಾಟದಲ್ಲಿ ಕೊಡಗಿನ ಕಕ್ಕಬೆಯ ಟೀಂ ಸ್ಟೆಪ್ಸ್, ಪೊನ್ನಂಪೇಟೆಯ ಟೀಂ ಕ್ಯಾಂಪರ್ಸ್, ಕೊಡಗು ವಿದ್ಯಾಲಯದ ಎ ಮತ್ತು ಬಿ ಹಾಗೂ ಎಫ್.ಎಂ.ಸಿ. ಟ್ರಸ್ಟ್ನ ಎ ಮತ್ತು ಬಿ ತಂಡಗಳು ಭಾಗವಹಿಸಿ ಅಂತಿಮವಾಗಿ ಎಫ್.ಎಂ.ಸಿ. ಟ್ರಸ್ಟ್ನ ಎ ಮತ್ತು ಕೊಡಗು ವಿದ್ಯಾಲಯದ ಎ ತಂಡಗಳು ಫೈನಲ್ ಪ್ರವೇಶಿಸಿದ್ದು, ಎಫ್.ಎಂ.ಸಿ.ಯ ಕ್ಯಾಂಪರ್ಸ್ ಕಪ್ಗಾಗಿ ಪೈಪೋಟಿ ನಡೆಸಲಿವೆ.
ಈ ಅಂತಿಮ ಪಂದ್ಯಾಟಕ್ಕೆ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ ಮತ್ತು ಟ್ರಸ್ಟ್ನ ಸ್ಥಾಪಕ ಅಧ್ಯಕ್ಷ ನಾಯಡ ವಾಸು ನಂಜಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ನ ಅಧ್ಯಕ್ಷ ಡಾ. ಎಂ.ಸಿ. ಕಾರ್ಯಪ್ಪ ವಹಿಸಲಿದ್ದಾರೆ ಎಂದು ಟ್ರಸ್ಟ್ನ ಕಾರ್ಯದರ್ಶಿ ಸಂಪಿ ಪೂಣಚ್ಚ ತಿಳಿಸಿದ್ದಾರೆ.